Genesis 47:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲನು, “ನನಗೆ ಪ್ರಮಾಣ ಮಾಡು” ಎಂದು ಹೇಳಿದ್ದರಿಂದ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಮೇಲೆ ಇಸ್ರೇಲನು ಹಾಸಿಗೆಯ ಮೇಲೆ ಮತ್ತೆ ತನ್ನ ತಲೆಬಾಗಿ ದೇವರಿಗೆ ನಮಸ್ಕರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲನು, “ಪ್ರಮಾಣಮಾಡು” ಎನ್ನಲು ಅವನು ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಬಾಗಿ ದೇವರಿಗೆ ನಮಸ್ಕಾರ ಮಾಡಿದನು.
Kannada BSI Bible 2016
ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲನು - ಪ್ರಮಾಣ ಮಾಡು ಅನ್ನಲು ಅವನು ಪ್ರಮಾಣಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿ ದೇವರಿಗೆ ನಮಸ್ಕಾರಮಾಡಿದನು.
Kannada Bible (KNCL) BSI 2016
ಆಗ ಯಕೋಬನು ಆ ಹಾಸಿಗೆಯ ತಲೆಭಾಗದ ಕಡೆ ಬಾಗಿ ಸ್ತೋತ್ರ ಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಕೋಬನು ತನಗೆ ಪ್ರಮಾಣಮಾಡು ಎಂದಾಗ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.