Genesis 48:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸ್ವಲ್ಪ ಕಾಲದ ನಂತರ, ತಂದೆಯು ಬಹಳ ಅನಾರೋಗ್ಯದಿಂದಿರುವುದು ಯೋಸೇಫನಿಗೆ ತಿಳಿಯಿತು. ಆದ್ದರಿಂದ ಅವನು ತನ್ನ ಇಬ್ಬರು ಗಂಡುಮಕ್ಕಳಾದ ಮನಸ್ಸೆಯನ್ನು ಮತ್ತು ಎಫ್ರಾಯೀಮನನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲವು ಕಾಲವಾದ ಮೇಲೆ ಯೋಸೇಫನಿಗೆ, “ಅವನ ತಂದೆಯು ಅಸ್ವಸ್ಥನಾಗಿದ್ದಾನೆ” ಎಂಬ ವಾರ್ತೆಯು ದೊರಕಿತು. ಆಗ ಯೋಸೇಫನು ಮನಸ್ಸೆ ಎಫ್ರಾಯೀಮರೆಂಬ ತನ್ನಿಬ್ಬರು ಮಕ್ಕಳನ್ನು ತನ್ನ ಸಂಗಡ ಕರೆದುಕೊಂಡು ತಂದೆಯ ಬಳಿಗೆ ಬಂದನು.
Kannada BSI Bible 2016
ಇವುಗಳಾದ ಮೇಲೆ ಒಬ್ಬನು ಯೋಸೇಫನಿಗೆ--ಇಗೋ, ನಿನ್ನ ತಂದೆಯು ಅಸ್ವಸ್ಥ ನಾಗಿದ್ದಾನೆ ಎಂದು ಹೇಳಿದನು. ಆಗ ಅವನು ತನ್ನ ಇಬ್ಬರು ಕುಮಾರರಾದ ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಕರಕೊಂಡು ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲವು ಕಾಲವಾದ ಮೇಲೆ ತಂದೆಯು ಬಹಳ ಬಲಹೀನನಾಗಿ ಬಿದ್ದಿದ್ದಾನೆಂಬ ವರ್ತಮಾನವು ಯೋಸೇಫನಿಗೆ ಬರಲು ಅವನು ಮನಸ್ಸೆ ಎಫ್ರಾಯೀಮರೆಂಬ ತನ್ನಿಬ್ಬರು ಮಕ್ಕಳನ್ನು ಸಂಗಡ ಕರೆದುಕೊಂಡು ಅವನ ಬಳಿಗೆ ಬಂದನು.
Kannada Bible (KNCL) BSI 2016
ಕೆಲವು ಕಾಲವಾದ ಮೇಲೆ, “ತಂದೆ ಬಹಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ,” ಎಂಬ ಸುದ್ದಿ ಜೋಸೆಫನಿಗೆ ಬಂದಿತು. ಅವನು ಮನಸ್ಸೆ ಮತ್ತು ಎಫ್ರಯಿಮ್ ಎಂಬ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೆಲವು ಕಾಲದ ನಂತರ ಯೋಸೇಫನಿಗೆ, “ನಿನ್ನ ತಂದೆ ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಬಂದಿತು. ಆಗ ಅವನು ತನ್ನ ಇಬ್ಬರು ಪುತ್ರರಾದ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಕರೆದುಕೊಂಡು ತಂದೆಯ ಬಳಿಗೆ ಬಂದನು.