Genesis 48:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪದ್ದನ್‌ಅರಾಮಿನಿಂದ ಹಿಂತಿರುಗಿ ಬರುತ್ತಿರುವಾಗ ರಾಹೇಲಳು ಸತ್ತಳು. ಇದು ನನಗೆ ತುಂಬ ದುಃಖವನ್ನು ಉಂಟುಮಾಡಿತು. ನಾವು ಕಾನಾನ್ ದೇಶದಲ್ಲಿ ಎಫ್ರಾತ್ ನಗರದ ಕಡೆಗೆ ಪ್ರಯಾಣ ಮಾಡುತ್ತಿದ್ದೆವು. ಆದ್ದರಿಂದ ನಾನು ಅವಳನ್ನು ಬೆತ್ಲೆಹೇಮೆಂಬ ಎಫ್ರಾತ್ ನಗರದ ರಸ್ತೆಯಲ್ಲಿ ಸಮಾಧಿ ಮಾಡಿದೆನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಪದ್ದನ್ ಅರಾಮಿನಿಂದ ಬರುವಾಗ ಕಾನಾನ್ ದೇಶದಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ದಾರಿಯಲ್ಲೇ ಸತ್ತುಹೋದಳು. ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಗೆ ಸಮಾಧಿ ಮಾಡಿದೆನು ಎಂದನು.
Kannada BSI Bible 2016
ನಾನು ಪದ್ದನ್‌ ಅರಾಮಿನಿಂದ ಬಂದಾಗ ಕಾನಾನ್‌ದೇಶದಲ್ಲಿ ಎಫ್ರಾ ತಿಗೆ ಸ್ವಲ್ಪ ದೂರದಲ್ಲಿರುವಾಗ ರಾಹೇಲಳು ನನ್ನ ಬಳಿಯಲ್ಲಿ ಸತ್ತಳು. ಅಲ್ಲಿ ಅಂದರೆ ಬೇತ್ಲೆಹೇಮೆಂಬ ಎಫ್ರಾತಿನ ಮಾರ್ಗದಲ್ಲಿ ಆಕೆಯನ್ನು ಹೂಣಿಟ್ಟೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಪದ್ದನ್ಅರಾವಿುನಿಂದ ಬರುತ್ತಿರಲು ಕಾನಾನ್‍ದೇಶದಲ್ಲಿ ಎಫ್ರಾತನ್ನು ಸೇರುವದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ದಾರಿಯಲ್ಲೇ ಸತ್ತು ನನ್ನನ್ನು ಅಗಲಿಹೋದಳು. ಬೇತ್ಲೆಹೇಮೆಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಗೆ ಸಮಾಧಿ ಮಾಡಿದೆನು ಎಂದು ಹೇಳಿದನು.
Kannada Bible (KNCL) BSI 2016
ಏಕೆಂದರೆ ನಿಮ್ಮ ತಾಯಿ ರಾಖೇಲಳು, ನಾನು ಮೆಸಪೊಟೇಮಿಯಾದಿಂದ ಬರುವಾಗ, ಕಾನಾನ್ ನಾಡಿನಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನು ಸ್ವಲ್ಪ ದೂರ ಇದ್ದಾಗಲೆ ದಾರಿಯಲ್ಲಿ ಸತ್ತು ನನ್ನನ್ನು ಅಗಲಿಹೋದಳು. ಈಗ ಬೇತ್ಲೆಹೇಮ್ ಎನಿಸಿಕೊಳ್ಳುವ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಆಕೆಯನ್ನು ಸಮಾಧಿಮಾಡಿದೆ,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಪದ್ದನ್ ಅರಾಮಿನಿಂದ ಬಂದಾಗ, ಕಾನಾನ್ ದೇಶದಲ್ಲಿ ಎಫ್ರಾತಿನಿಂದ ಸ್ವಲ್ಪ ದೂರವಾಗಿರುವಾಗ, ರಾಹೇಲಳು ಸತ್ತುಹೋದಳು. ಅಲ್ಲಿ ಅಂದರೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಯನ್ನು ಸಮಾಧಿಮಾಡಿದೆನು,” ಎಂದನು.