Genesis 49:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು. ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಾನು ಸೇರಿದ ಪ್ರದೇಶವು ವಿಶ್ರಾಂತಿಗೆ ಅನುಕೂಲವೂ ಸುಖಾಸ್ಪದವೂ ಆಗಿರುವುದನ್ನು ಕಂಡನು. ಅವನು ಹೊರೆಯನ್ನು ಹೊರುವುದಕ್ಕೆ ಬೆನ್ನು ಬಗ್ಗಿಸಿಕೊಂಡು ಬಿಟ್ಟೀ ಸೇವೆಮಾಡುವನು.
Kannada BSI Bible 2016
ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಾನು ಸೇರಿದ ಪ್ರದೇಶವು ವಿಶ್ರಾಂತಿಗೆ ಅನುಕೂಲವೂ ಸುಖಾಸ್ಪದವೂ ಆಗಿರುವದನ್ನು ನೋಡಿ ಅವನು ಹೊರೆಯನ್ನು ಹೊರುವದಕ್ಕೆ ಬೆನ್ನು ಬೊಗ್ಗಿಸಿಕೊಂಡು ಬಿಟ್ಟೀ ಕೆಲಸವನ್ನು ಮಾಡುವವನಾದನು.
Kannada Bible (KNCL) BSI 2016
ಸೂಕ್ತವೆಂದುಕೊಂಡು ತನ್ನ ನಾಡು ವಿಶ್ರಾಂತಿಗೆ, ಸುಖಾನುಭವಕೆ ಬಗ್ಗಿಸುವನು ಬೆನ್ನನು ಹೊರೆ ಹೊರುವುದಕ್ಕೆ, ಬಿಟ್ಟಿಯ ಕೆಲಸಕ್ಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವಿಶ್ರಾಂತಿಯು ಒಳ್ಳೆಯದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆ ಹೊರುವುದಕ್ಕೆ ತನ್ನ ಹೆಗಲನ್ನು ಬಗ್ಗಿಸಿ ಬಿಟ್ಟಿಯ ಕೆಲಸ ಮಾಡುವನು.