Genesis 49:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ರೂಬೇನನೇ, ನೀನು ನನ್ನ ಚೊಚ್ಚಲು ಮಗ. ನೀನೇ ನನ್ನ ಮೊದಲನೆಯ ಮಗ. ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ, ನನ್ನ ಪ್ರಥಮಫಲವೂ, ಗೌರವದಲ್ಲಿಯೂ, ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ.
Kannada BSI Bible 2016
ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ ನನ್ನ ವೀರ್ಯಕ್ಕೆ ಪ್ರಥಮ ಫಲವೂ ಗೌರವದಲ್ಲಿಯೂ ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ.
Kannada Bible (KNCL) BSI 2016
ರೂಬೇನನೇ, ನೀನೆನ್ನ ಜೇಷ್ಠಪುತ್ರನು ನನ್ನ ಚೈತನ್ಯಸ್ವರೂಪನು, ನನ್ನ ವೀರ್ಯದ ಪ್ರಥಮ ಫಲ ನೀನು ಹಿರಿಮೆಯಲು, ಒಲುಮೆಯಲು ಪ್ರಮುಖನೆನಿಸಿಕೊಳ್ಳುವವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ರೂಬೇನನೇ, ನೀನು ನನ್ನ ಜೇಷ್ಠಪುತ್ರನು. ನನ್ನ ಶಕ್ತಿ, ನನ್ನ ಬಲದ ಸಂಕೇತವೂ, ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ.