Habakkuk 2:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಷ್ಟೋ ಜನರನ್ನು ನಾಶಮಾಡಲು ನೀನು ಯೋಜನೆ ಮಾಡಿರುವೆ. ಆದರೆ ಆ ಯೋಜನೆಗಳು ನಿನ್ನ ಮನೆಗೆ ನಾಚಿಕೆಯನ್ನು ತಂದೊಡ್ಡುವವು. ನೀನು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನೀನು ನಿನ್ನ ಪ್ರಾಣವನ್ನು ಕಳೆದುಕೊಳ್ಳುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಬಹು ಜನರನ್ನು ನಿರ್ಮೂಲ ಮಾಡಿದ್ದು ನಿನ್ನ ಕುಂಟುಂಬಕ್ಕೆ ಅವಮಾನವನ್ನೇ ತಂದಂತಾಯಿತು, ನಿನಗೇ ನೀನೇ ಕೆಡುಕು ಮಾಡಿಕೊಂಡಿದ್ದೀ.
Kannada BSI Bible 2016
ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಬಹುಜನಾಂಗಗಳನ್ನು ನಿರ್ಮೂಲಮಾಡಿದ್ದು ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು, ನಿನಗೇ ಕೆಡುಕುಮಾಡಿಕೊಂಡಿದ್ದೀ.
Kannada Bible (KNCL) BSI 2016
ನಿನ್ನ ಯೋಜನೆಗಳಿಂದ ನಿನ್ನ ಮನೆತನಕ್ಕೆ ಅಪಕೀರ್ತಿ ತಂದುಕೊಂಡಿರುವೆ. ಹಲವಾರು ನಾಡುಗಳನ್ನು ನಿರ್ಮೂಲಮಾಡಿ ನಿನ್ನ ವಂಶಕ್ಕೆ ವಿನಾಶವನ್ನು ಬರಮಾಡಿಕೊಂಡಿರುವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಬಹು ಜನಾಂಗಗಳನ್ನು ನಿರ್ಮೂಲ ಮಾಡಿದ್ದು, ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು. ನಿನಗೆ ನೀನೇ ಕೆಡುಕು ಮಾಡಿಕೊಂಡಿದ್ದೀ.