Habakkuk 2:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಜನರು ಕಟ್ಟುವ ಪ್ರತಿಯೊಂದನ್ನೂ ಸರ್ವಶಕ್ತನಾದ ಯೆಹೋವನು ಬೆಂಕಿಯಿಂದ ನಾಶಮಾಡುವ ತೀರ್ಮಾನವನ್ನು ಮಾಡಿರುತ್ತಾನೆ. ಅವರು ಮಾಡಿದ ಕೆಲಸವೆಲ್ಲವೂ ವ್ಯರ್ಥವಾಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು, ಈ ರೀತಿಯಾಗಿ ಜನರು ಪಟ್ಟ ಪರಿಶ್ರಮವು ವ್ಯರ್ಥವಾಗುವುದು ಎಂದು ಯೆಹೋವನು ನುಡಿದ್ದರಿಂದಲೇ ಅಲ್ಲವೇ; ಇದೆಲ್ಲ ಸೇನಾಧೀಶ್ವರನ ಚಿತ್ತವಷ್ಟೇ.
Kannada BSI Bible 2016
ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜನಗಳು ದುಡಿದದ್ದು ಬೆಂಕಿಗೆ ತುತ್ತಾಗುವದು, ಜನಾಂಗಗಳು ಪಟ್ಟ ಪರಿಶ್ರಮವು ವ್ಯರ್ಥವಾಗುವದು, ಆಹಾ, ಇದೆಲ್ಲಾ ಸೇನಾಧೀಶ್ವರನಾದ ಯೆಹೋವನಿಂದಲೇ ಸಂಭವಿಸುವದಷ್ಟೆ.
Kannada Bible (KNCL) BSI 2016
ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು. ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥವಾಗುವುದು. ಇದೆಲ್ಲ ಸೇನಾಧೀಶ್ವರ ಸರ್ವೇಶ್ವರನ ಚಿತ್ತವಷ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರ ಶ್ರಮೆಯು ಬೆಂಕಿಗೆ ತುತ್ತಾಗುವುದು. ಜನಾಂಗಗಳು ವ್ಯರ್ಥವಾಗಿ ದಣಿದುಕೊಳ್ಳುತ್ತವೆ. ಇದು ಸೇನಾಧೀಶ್ವರ ಯೆಹೋವ ದೇವರ ಚಿತ್ತವಷ್ಟೆ.