Habakkuk 2:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಲೆಬನೋನಿನಲ್ಲಿ ಅನೇಕರನ್ನು ಗಾಯಗೊಳಿಸಿರುವೆ. ಅಲ್ಲಿ ಎಷ್ಟೋ ಪಶುಗಳನ್ನು ಅಪಹರಿಸಿರುವೆ. ಆ ದೇಶದಲ್ಲಿ ನೀನು ಮಾಡಿದ ದುಷ್ಕೃತ್ಯಗಳ ನಿಮಿತ್ತ, ಅದರಿಂದಾಗಿ ಅಲ್ಲಿ ಸತ್ತುಹೋದವರ ನಿಮಿತ್ತ ನೀನು ಭಯಗ್ರಸ್ತನಾಗಿರುವೆ. ಅಲ್ಲಿಯ ಪಟ್ಟಣಗಳಿಗೆ ನೀನು ಮಾಡಿದ ಹಾನಿ, ಜನರಿಗೆ ನೀನು ಕೊಟ್ಟ ಸಂಕಟದ ನಿಮಿತ್ತ ನಿನಗೆ ಹೆದರಿಕೆಯುಂಟಾಗಿದೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೆಬನೋನಿಗೆ ಆದಂಥ ಹಿಂಸೆಯ ಬಾರವು ನಿನ್ನನ್ನು ಕಾಡುವುದು, ಮೃಗಪಶುಗಳ ನಾಶನವು ನಿನ್ನನ್ನು ಹೆದರಿಸುವುದು; ನೀನು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಹಿಂಸಿಸಿದ ಕಾರಣ ಅದು ನಿನ್ನನ್ನು ಕಾಡುವುದು.
Kannada BSI Bible 2016
ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ ಪುರವನ್ನೂ ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿದ ಕಾರಣ ಲೆಬನೋನಿಗೆ ಆದಂಥ ಹಿಂಸೆಗೆ ನೀನೂ ಒಳಗಾಗುವಿ, ಮೃಗಪಶುಗಳ ನಾಶನವು ನಿನ್ನನ್ನೂ ಹೆದರಿಸುವದು.
Kannada Bible (KNCL) BSI 2016
ನೀನು ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಲೆಬನೋನ್ ಅರಣ್ಯಗಳನ್ನೂ ಕಡಿದುಹಾಕಿರುವೆ. ಈಗ ನಿನ್ನನ್ನೇ ಕಡಿದುಹಾಕಲಾಗುವುದು. ಅದರ ಪ್ರಾಣಿಪಕ್ಷಿಗಳನ್ನು ನಾಶಮಾಡಿರುವೆ. ಈಗ ಅವು ನಿನಗೆ ಭಯಾನಕವಾಗಿರುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೆಬನೋನಿನ ಮೇಲೆ ಮಾಡಿದ ಬಲಾತ್ಕಾರವು ನಿನ್ನನ್ನು ಚಕಿತಗೊಳಿಸುವುದು. ಮೃಗಗಳ ನಾಶವು ನಿನ್ನನ್ನು ಹೆದರಿಸುವುದು. ಏಕೆಂದರೆ ನೀನು ಮನುಷ್ಯರ ರಕ್ತ ಸುರಿಸಿದ್ದೀ; ನೀನು ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿರುವ ಎಲ್ಲವುಗಳನ್ನು ನಾಶಮಾಡಿದ್ದೀ.