Habakkuk 3:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪರ್ವತಗಳು ನಿನ್ನನ್ನು ನೋಡಿ ನಡುಗಿದವು. ನೆಲದ ಮೇಲಿಂದ ನೀರು ಹರಿದುಹೋಯಿತು. ಭೂಮಿಯ ಮೇಲೆ ತನಗಿದ್ದ ಶಕ್ತಿ ಹೋದದ್ದನ್ನು ನೋಡಿ ಸಮುದ್ರವು ಗಟ್ಟಿಯಾಗಿ ಶಬ್ದ ಮಾಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತಿವೆ; ಪ್ರವಾಹದೋಪಾದಿಯಲ್ಲಿ ಆಕಾಶವು ಮಳೆಗರೆಯುತ್ತಿದೆ; ಸಾಗರವು ಆರ್ಭಟಿಸಿ ಅಲೆಗಳನ್ನು ಮೇಲಕ್ಕೆ ಎತ್ತುತ್ತದೆ.
Kannada BSI Bible 2016
ಬೆಟ್ಟಗಳು ನಿನ್ನನ್ನು ನೋಡಿ ನಡುಗಿದವು; ಜಲ ಪ್ರವಾಹವು ಹಾದು ಹೋಯಿತು; ಅಗಾಧವು ತನ್ನ ಶಬ್ದವನ್ನು ಕೊಟ್ಟಿತು; ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಕೊಂಡಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತವೆ; ಅತಿವೃಷ್ಟಿಯು ಹೊಯ್ದುಕೊಂಡು ಹೋಗುತ್ತದೆ; ಸಾಗರವು ಆರ್ಭಟಿಸಿ ಕೈಗಳನ್ನು ಮೇಲಕ್ಕೆತ್ತುತ್ತದೆ.
Kannada Bible (KNCL) BSI 2016
ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು ಹರಿಯುತ್ತವೆ ಆಗಸದಿಂದ ಪ್ರವಾಹಗಳು ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಟ್ಟಗಳು ನಿನ್ನನ್ನು ಕಂಡು ನಡುಗಿದವು; ಜಲಪ್ರವಾಹವು ಹಾದುಹೋಯಿತು; ಸಾಗರವು ಗರ್ಜಿಸಿ; ತನ್ನ ತೆರೆಗಳನ್ನು ಮೇಲಕ್ಕೆ ಎತ್ತುತ್ತದೆ.