Haggai 2:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೀಗೆನ್ನುತ್ತಾನೆ, “ಈ ಹೊತ್ತು ಒಂಭತ್ತನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸವಾಗಿದೆ. ಆಲಯದ ಶಂಕುಸ್ಥಾಪನೆ ಮಾಡಿ ಮುಗಿಸಿರುತ್ತೀರಿ. ಇನ್ನು ಮುಂದಕ್ಕೆ ಏನು ನಡಿಯುತ್ತದೆಂದು ಗಮನಿಸಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಜ್ಞಾಪಕಮಾಡಿಕೊಳ್ಳಿರಿ, ಯೆಹೋವನ ಆಲಯಕ್ಕೆ ಅಸ್ತಿವಾರ ಹಾಕಿದ ಈ ದಿನದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.
Kannada BSI Bible 2016
ಚೆನ್ನಾಗಿ ಯೋಚಿಸಿಕೊಳ್ಳಿರಿ; ಇಂದಿನಿಂದ ಇದಕ್ಕೆ ಮುಂಚೆ ಒಂಭತ್ತನೇ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ಮಂದಿರದ ಅಸ್ತಿವಾರವು ಹಾಕಲ್ಪ ಟ್ಟಂದಿನಿಂದ ಯೋಚಿಸಿ ಕೊಳ್ಳಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜ್ಞಾಪಕಮಾಡಿಕೊಳ್ಳಿರಿ; ಯೆಹೋವನ ಆಲಯಕ್ಕೆ ಅಸ್ತಿವಾರಹಾಕಿದ ಈ ದಿವಸದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ. ಕಣಜದಲ್ಲಿ ಕಾಳು ಇನ್ನು ಇದೆಯೋ?
Kannada Bible (KNCL) BSI 2016
ಮಹಾದೇವಾಲಯಕ್ಕೆ ಅಸ್ತಿಭಾರಹಾಕಿದ ಅಂದರೆ, ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೇ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಚೆನ್ನಾಗಿ ನೆನಪಿಗೆ ತಂದುಕೊಳ್ಳಿರಿ. ಇಂದಿನಿಂದ ಇದಕ್ಕೆ ಮುಂಚೆ ಒಂಬತ್ತನೆಯ ತಿಂಗಳಿನ, ಇಪ್ಪತ್ನಾಲ್ಕನೆಯ ದಿವಸದಲ್ಲಿ, ಯೆಹೋವ ದೇವರ ಮಂದಿರದ ಅಸ್ತಿವಾರವು ಹಾಕಲಾದ ದಿನದಿಂದ ಸೂಕ್ಷ್ಮವಾಗಿ ಯೋಚಿಸಿಕೊಳ್ಳಿರಿ.