Hebrews 10:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.” ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ.
Kannada BSI Bible 2016
ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು ಹೇಳಿದಾತನನ್ನು ಬಲ್ಲೆವು; ಇದಲ್ಲದೆ ಕರ್ತನು ತನ್ನ ಜನರ ನ್ಯಾಯವನ್ನು ವಿಚಾರಿಸುವನೆಂತಲೂ ಹೇಳಿಯದೆ.
Kannada Bible (KNCL) BSI 2016
“ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ, “ಮುಯ್ಯಿ ತೀರಿಸುವುದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆನು,” ಎಂದು ಹೇಳಿದ ಕರ್ತದೇವರನ್ನು ನಾವು ಬಲ್ಲೆವು. ಇದಲ್ಲದೆ, “ಕರ್ತದೇವರು ತಮ್ಮ ಜನರಿಗೆ ನ್ಯಾಯತೀರಿಸುವರು,” ಎಂದೂ ಹೇಳಲಾಗಿದೆ.