Hebrews 12:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದ್ದರಿಂದ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ.
Kannada BSI Bible 2016
ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ;
Kannada Bible (KNCL) BSI 2016
ಆದ್ದರಿಂದ ಯಾರಿಂದಲೂ ಕದಲಿಸಲಾಗದ ಸಾಮ್ರಾಜ್ಯವನ್ನು ಪಡೆದಿರುವ ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸೋಣ. ಅವರಿಗೆ ಚಿರಋಣಿಗಳಾಗಿದ್ದು, ಭಯಭಕ್ತಿಯಿಂದ ಸಮರ್ಪಕ ಆರಾಧನೆಯನ್ನು ಸಲ್ಲಿಸೋಣ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು, ಸ್ವೀಕರಿಸುವವರಾಗಿದ್ದುದರಿಂದ ನಾವು ಕೃತಜ್ಞತೆಯಿಂದ ಇರೋಣ. ನಾವು ದೇವರಿಗೆ ಭಯಭಕ್ತಿಯಿಂದ ಕೂಡಿದ ಮೆಚ್ಚಿಕೆಯುಳ್ಳ ಸೇವೆಯನ್ನು ಸಲ್ಲಿಸುವಂತೆ ಕೃತಜ್ಞತೆಯನ್ನು ತೋರಿಸುವವರಾಗಿರೋಣ.