Hebrews 13:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮನ್ನು ತಪ್ಪು ಮಾರ್ಗಕ್ಕೆ ಎಳೆಯುವಂತಹ ಅನ್ಯೋಪದೇಶಗಳ ಕಡೆಗೆ ಗಮನಕೊಡಬೇಡಿ. ನಿಮ್ಮ ಹೃದಯಗಳು ದೇವರ ಕೃಪೆಯಿಂದ ಬಲವಾಗಬೇಕೇ ಹೊರತು ಆಹಾರದ ನಿಯಮಗಳ ಪಾಲನೆಯಿಂದಲ್ಲ. ಆ ನಿಯಮಗಳ ಪಾಲನೆಯು ಜನರಿಗೆ ಸಹಾಯಕವಾಗುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
Kannada BSI Bible 2016
ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ಯಾಕಂದರೆ ಕೃಪೆಯೊಂದಿಗೆ ಹೃದಯವನ್ನು ದೃಢ ಮಾಡಿಕೊಳ್ಳುವದು ಉತ್ತಮವೇ; ಭೋಜನ ಪದಾರ್ಥಗಳಲ್ಲಿ ಮಗ್ನರಾದವರು ಅವುಗಳಲ್ಲಿ ಏನೂ ಪ್ರಯೋಜನ ಹೊಂದಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನಾವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ದೇವರ ಕೃಪೆಯನ್ನು ಆತುಕೊಂಡು ಮನಸ್ಸನ್ನು ದೃಢಮಾಡಿಕೊಳ್ಳುವದು ಉತ್ತಮವೇ; ಭೋಜನಪದಾರ್ಥಗಳನ್ನು ವಿಶೇಷಿಸುವದರಿಂದ ಅದು ಆಗುವದಿಲ್ಲ. ಭೋಜನಪದಾರ್ಥಗಳನ್ನು ವಿಶೇಷಿಸಿ ನಡೆದವರು ಏನೂ ಪ್ರಯೋಜನ ಹೊಂದಲಿಲ್ಲ.
Kannada Bible (KNCL) BSI 2016
ನಾನಾವಿಧವಾದ ವಿಚಿತ್ರ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ನಿಮ್ಮ ಹೃದಯವನ್ನು, ಊಟೋಪಚಾರಗಳನ್ನು ಕುರಿತ ವಿಧಿನಿಯಮಗಳಿಂದ ಅಲ್ಲ, ದೇವರ ವರಪ್ರಸಾದದಿಂದ ದೃಢಪಡಿಸಿಕೊಳ್ಳಿ. ಅಂಥ ವಿಧಿನಿಯಮಗಳಿಗೆ ಬದ್ಧರಾಗಿದ್ದವರು ಯಾವ ಪ್ರಯೋಜನವನ್ನೂ ಪಡೆಯಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವಿಚಿತ್ರವಾದ ವಿವಿಧ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ಏಕೆಂದರೆ ಕೃಪೆಯ ಮೂಲಕ ಹೃದಯವನ್ನು ಬಲಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳಲ್ಲಿ ಮಗ್ನರಾದವರು, ಅವುಗಳಿಂದ ಏನೂ ಪ್ರಯೋಜನ ಹೊಂದಲಿಲ್ಲ.