Hebrews 3:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪವಿತ್ರ ಗ್ರಂಥವು ಹೇಳುವುದೇನೆಂದರೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ, ಪೂರ್ವಿಕರು ಮೊಂಡುತನದಿಂದ ಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.”
Kannada BSI Bible 2016
ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ, ನಿಮ್ಮ ಹಿರಿಯರು ದೇವರ ಕೋಪವನ್ನೆಬ್ಬಿಸಿದ ಸ್ಥಳದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ
Kannada Bible (KNCL) BSI 2016
“ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು ಮರುಭೂಮಿಯಲಿ ದೇವರ ವಿರುದ್ಧ ದಂಗೆಯೆದ್ದವರವರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಗಲೇ ಹೇಳಿದಂತೆ: “ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ, ತಿರುಗಿಬಿದ್ದಾಗ ನಡೆದಂತೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”