Hebrews 7:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದನರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಇವು ಯಾರ ಕುರಿತಾಗಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಒಬ್ಬನೂ ಯಜ್ಞವೇದಿಯ ಬಳಿ ಸೇವೆಮಾಡಿದ್ದಿಲ್ಲ.
Kannada BSI Bible 2016
ಇವು ಯಾವಾತನ ವಿಷಯ ದಲ್ಲಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸಂಬಂಧಪಟ್ಟವನು; ಆ ಗೋತ್ರದವರಲ್ಲಿ ಒಬ್ಬನೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೇಲ್ಕಂಡ ಮಾತು ಯಾವಾತನ ವಿಷಯದಲ್ಲಿ ಹೇಳಿದೆಯೋ ಆತನು ಬೇರೊಂದು ಕುಲದಲ್ಲಿ ಹುಟ್ಟಿದವನು; ಆ ಕುಲದವರಲ್ಲಿ ಒಬ್ಬರೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ.
Kannada Bible (KNCL) BSI 2016
ಇದನ್ನೆಲ್ಲಾ ಯಾರನ್ನು ಕುರಿತು ಹೇಳಲಾಗಿದೆಯೋ ಆ ವ್ಯಕ್ತಿ ಹುಟ್ಟಿದ್ದು ಬೇರೊಂದು ಕುಲದಲ್ಲಿ. ಆ ಕುಲದಲ್ಲಿ ಎಂದೂ ಯಾರೂ ಬಲಿಪೀಠದ ಸೇವೆ ಮಾಡಿದವರಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವು ಯಾರ ವಿಷಯದಲ್ಲಿ ಹೇಳಿದೆಯೋ ಆ ವ್ಯಕ್ತಿ ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಎಂದೂ ಯಾರೂ ಬಲಿಪೀಠದ ಬಳಿ ಸೇವೆ ಮಾಡಿದವರಲ್ಲ.