Hebrews 7:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಮೆಲ್ಕಿಜೆದೇಕನು ಲೇವಿಯ ವಂಶಾವಳಿಗೆ ಸೇರಿದವನಲ್ಲ, ಆದರೂ ಅಬ್ರಹಾಮನಿಂದ ದಶಮ ಭಾಗಗಳನ್ನು ತೆಗೆದುಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನನ್ನು ಆಶೀರ್ವದಿಸಿದನು.
Kannada BSI Bible 2016
ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವರ ವಂಶಾವಳಿಗೆ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದಲೇ ದಶಮಭಾಗಗಳನ್ನು ತಕ್ಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
Kannada Bible (KNCL) BSI 2016
ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ವಂಶಾವಳಿಯಲ್ಲಿ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ, ವಾಗ್ದಾನಗಳನ್ನು ಪಡೆದಿದ್ದ ಅಬ್ರಹಾಮನನ್ನು ಆಶೀರ್ವದಿಸಿದನು.