Hebrews 9:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ ದೇವಾಲಯವಿತ್ತು.
Kannada BSI Bible 2016
ಹೀಗಿದ್ದರೂ ಮೊದಲನೆಯ ಒಡಂಬಡಿಕೆ ಯಲ್ಲಿ ನಿಜವಾಗಿಯೂ ದೈವಸೇವೆಯ ನಿಯಮಗಳಿದ್ದವು; ಇಹಲೋಕ ಸಂಬಂಧವಾದ ಪವಿತ್ರಸ್ಥಳವಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿದ್ದರೂ ಮೊದಲನೆಯ ಒಡಂಬಡಿಕೆಯಲ್ಲಿ ದೇವಾರಾಧನೆಯ ನಿಯಮಗಳಿದ್ದವು; ಮತ್ತು ದೇವಾಲಯವಿತ್ತು, ಅದು ಇಹಲೋಕ ಸಂಬಂಧವಾದದ್ದು.
Kannada Bible (KNCL) BSI 2016
ಹಳೆಯ ಒಡಂಬಡಿಕೆಯಲ್ಲಿ ದೇವಾರಾಧನೆಗೆ ವಿಧಿನಿಯಮಗಳಿದ್ದವು; ಮಾನವ ನಿರ್ಮಿತ ದೇವಾಲಯವೂ ಇತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೊದಲನೆಯ ಒಡಂಬಡಿಕೆಯಲ್ಲಿ ದೈವಿಕ ಆರಾಧನೆಯ ಕ್ರಮಗಳಿದ್ದವು. ಮಾತ್ರವಲ್ಲದೆ ಮಾನವ ನಿರ್ಮಿತ ಪವಿತ್ರ ಸ್ಥಳವೂ ಇತ್ತು.