Hebrews 9:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.
Kannada BSI Bible 2016
ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವುಗಳು ಹೀಗೆ ಸಿದ್ಧಮಾಡಲ್ಪಟ್ಟ ಮೇಲೆ ಯಾಜಕರು ಯಾವಾಗಲೂ ಗುಡಾರದ ಮುಂದಣ ಭಾಗದೊಳಗೆ ಹೋಗಿ ದೇವಾರಾಧನೆಯನ್ನು ನಡಿಸುತ್ತಾರೆ.
Kannada Bible (KNCL) BSI 2016
ಹೀಗೆ ಇದೆಲ್ಲಾ ವ್ಯವಸ್ಥಿತವಾಗಿರಲು, ಯಾಜಕರು ಮೊದಲನೆಯ ಭಾಗವಾದ ಪವಿತ್ರಸ್ಥಳವನ್ನು ಮಾತ್ರ ಪ್ರವೇಶಿಸಿ, ಅಲ್ಲಿ ದೇವಾರಾಧನೆಯ ವಿಧಿಗಳನ್ನು ನಿರಂತರವಾಗಿ ನೆರವೇರಿಸುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವುಗಳು ಹೀಗೆ ಸಿದ್ಧವಾದ ಬಳಿಕ ಯಾಜಕರು ಯಾವಾಗಲೂ ಹೊರಗಿನ ಗುಡಾರವನ್ನು ಪ್ರವೇಶಿಸಿ ದೈವಿಕ ಆರಾಧನೆಯನ್ನು ನಡೆಸುತ್ತಿದ್ದರು.