Hosea 1:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗೋಮೆರಳು ತಿರುಗಿ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಳು. ಯೆಹೋವನು ಹೋಶೇಯನಿಗೆ, ಆಕೆಗೆ, “ಲೋರುಹಾಮ” ಎಂಬ ಹೆಸರನ್ನಿಡಲು ಹೇಳಿದನು. “ಯಾಕೆಂದರೆ, ನಾನು ಇನ್ನು ಮುಂದೆ ಇಸ್ರೇಲ್ ಜನಾಂಗವನ್ನು ಕ್ಷಮಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಯೆಹೋವನು ಹೋಶೇಯನಿಗೆ, “ಈ ಮಗುವಿಗೆ ‘ಲೋ ರುಹಾಮ ’ ಎಂಬ ಹೆಸರಿಡು; ಏಕೆಂದರೆ ನಾನು ಇಸ್ರಾಯೇಲ್ ವಂಶದವರಲ್ಲಿ ಇನ್ನು ವಾತ್ಸಲ್ಯವಿಡುವುದಿಲ್ಲ, ಅವರನ್ನು ಕ್ಷಮಿಸುವುದಿಲ್ಲ.
Kannada BSI Bible 2016
ಅವಳು ತಿರುಗಿ ಬಸುರಾಗಿ ಮಗಳನ್ನು ಹೆತ್ತಳು. ಆಗ ದೇವರು ಅವನಿಗೆ-- ಅವಳನ್ನು ಲೋರುಹಾಮ ಎಂಬ ಹೆಸರಿನಿಂದ ಕರೆ; ಯಾಕಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನ ದವರನ್ನು ಕರುಣಿಸುವದೇ ಇಲ್ಲ; ಆದರೆ ನಾನು ಅವರನ್ನು ಸಂಪೂರ್ಣವಾಗಿ ತೆಗೆದುಬಿಡುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವಳು ಪುನಃ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಾಗ ಯೆಹೋವನು ಹೋಶೇಯನನ್ನು ಕುರಿತು - ಈ ಮಗುವಿಗೆ ಲೋರುಹಾಮ ಎಂಬ ಹೆಸರಿಡು; ಏಕಂದರೆ ನಾನು ಇಸ್ರಾಯೇಲ್ ವಂಶದವರಲ್ಲಿ ಇನ್ನು ವಾತ್ಸಲ್ಯವಿಡುವದಿಲ್ಲ, ಅವರನ್ನು ಎಷ್ಟು ಮಾತ್ರವೂ ಕ್ಷವಿುಸುವದಿಲ್ಲ.
Kannada Bible (KNCL) BSI 2016
ಗೋಮೆರಳು ಪುನಃ ಗರ್ಭಿಣಿಯಾಗಿ ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಸರ್ವೇಶ್ವರ, ಹೊಶೇಯನಿಗೆ: “ಇವಳನ್ನು ‘ಲೋರುಹಾಮ’ ಎಂದು ಕರೆ. ಏಕೆಂದರೆ, ನಾನು ಇನ್ನು ಇಸ್ರಯೇಲರನ್ನು ಪ್ರೀತಿಸೆನು; ಇನ್ನು ಅವರನ್ನು ಕ್ಷಮಿಸೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಹೆತ್ತಳು. ಆಗ ಯೆಹೋವ ದೇವರು ಹೋಶೇಯನಿಗೆ, “ಅವಳನ್ನು ‘ಲೋರುಹಾಮಾ ’ ಎಂಬ ಹೆಸರಿನಿಂದ ಕರೆ. ಏಕೆಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನದವರಿಗೆ ಪ್ರೀತಿ ತೋರಿಸುವುದೇ ಇಲ್ಲ, ಅವರನ್ನು ಯಾವ ರೀತಿಯೂ ಕ್ಷಮಿಸುವದಿಲ್ಲ.