Hosea 10:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಎಫ್ರಾಯೀಮ್ ಹತೋಟಿಗೆ ಬಂದು ಕಣ ತುಳಿಯಲು ಇಷ್ಟಪಡುವ ಪ್ರಾಯದ ಹಸುವಿನಂತಿದೆ. ಆಕೆಯ ಕುತ್ತಿಗೆಗೆ ನಾನು ಒಂದು ಒಳ್ಳೆಯ ನೊಗವನ್ನಿಡುವೆನು. ಎಫ್ರಾಯೀಮನಿಗೆ ನಾನು ಹಗ್ಗದಿಂದ ಬಂಧಿಸುವೆನು. ಆಗ ಯೆಹೂದವು ಭೂಮಿಯನ್ನು ಉಳುವದು. ಯಾಕೋಬನು ಮಣ್ಣಿನ ಗೆಡ್ಡೆಗಳನ್ನು ಒಡೆದು ಪುಡಿಮಾಡುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಫ್ರಾಯೀಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿಯುತ್ತಿರುವುದರಲ್ಲಿಯೇ ಇಷ್ಟಪಡುವ ಕಡಸಾಗಿದೆ; ಈಗಲಾದರೋ ಅದರ ಅಂದವಾದ ಹೆಗಲಿನ ಮೇಲೆ ಕೈಹಾಕಿದ್ದೇನೆ, ಎಫ್ರಾಯೀಮನ್ನು ನೊಗಕ್ಕೆ ಹೂಡುವೆನು, ಯೆಹೂದವು ಉಳಬೇಕು, ಯಾಕೋಬು ಕುಂಟೆ ಎಳೆಯಬೇಕು.
Kannada BSI Bible 2016
ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಫ್ರಾಯೀಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿಯುತ್ತಿರುವದರಲ್ಲಿಯೇ ಇಷ್ಟಪಡುವ ಕಡಸಾಗಿದೆ; [ಈಗಲಾದರೋ] ಅದರ ಅಂದವಾದ ಹೆಗಲಿನ ಮೇಲೆ ಕೈಹಾಕಿದ್ದೇನೆ, ಎಫ್ರಾಯೀಮನ್ನು ಹೂಡುವೆನು, ಯೆಹೂದವು ಉಳಬೇಕು, ಯಾಕೋಬು ಕುಂಟೆ ಎಳೆಯಬೇಕು.
Kannada Bible (KNCL) BSI 2016
“ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಫ್ರಾಯೀಮು ಒಂದು ತರಬೇತಿ ಪಡೆದ ಕಡಸಾಗಿದೆ. ಅದು ತುಳಿಯುವುದನ್ನು ಇಷ್ಟಪಡುತ್ತದೆ. ಆದರೆ ನಾನು ಅದರ ಸುಂದರವಾದ ಕುತ್ತಿಗೆಯ ಮೇಲೆ ನೊಗವನ್ನು ಹೊರುತ್ತೇನೆ. ಎಫ್ರಾಯೀಮು ಸವಾರಿ ಮಾಡುವ ಹಾಗೆ ನಾನು ಮಾಡುವೆನು. ಯೆಹೂದ ಉಳುವನು. ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.