Hosea 10:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ದಿನದಲ್ಲಿ ಬೇತೇಲು ನಿನಗೆ ಆ ದುರ್ಗತಿಯನ್ನು ತರುವದು. ಯಾಕೆಂದರೆ ನೀನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ. ಅದು ಪ್ರಾರಂಭವಾದಾಗ ಇಸ್ರೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ದುಷ್ಟತನವು ಬಹಳವಾಗಿರುವುದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವುದು; ಬೆಳಗಾಗುವುದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು.
Kannada BSI Bible 2016
ಹಾಗೆಯೇ ನಿಮ್ಮ ಬಹಳ ದುಷ್ಟತ್ವದ ನಿಮಿತ್ತ ಬೇತೇಲು ನಿಮಗೆ ಹೀಗೆ ಮಾಡುವದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ಕಡಿಯಲ್ಪ ಡುವನು (ಹಾಳಾಗುವನು).
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ದುಷ್ಟತನವು ಬಹಳವಾಗಿರುವದರಿಂದ ಬೇತೇಲು ಇಂಥ ದುರ್ಗತಿಯನ್ನು ನಿಮಗೆ ತರುವದು; ಬೆಳಗಾಗುವದರೊಳಗೆ ಇಸ್ರಾಯೇಲಿನ ರಾಜನು ತೀರಾ ಹಾಳಾಗುವನು.
Kannada Bible (KNCL) BSI 2016
ಬೇತೇಲಿನ ಜನರೇ, ನಿಮಗೂ ಇಂಥ ದುರ್ಗತಿಯೇ ಸಂಭವಿಸಲಿರುವುದು. ಬೆಳಗಾಗುವುದರೊಳಗೆ ಇಸ್ರಯೇಲಿನ ರಾಜನು ಹತನಾಗುವನು. ಕಾರಣ, ನಿಮ್ಮ ಅಕ್ರಮವು ಘೋರವಾದುದು!”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ, ಬಹಳ ದುಷ್ಟತ್ವದ ನಿಮಿತ್ತ ಬೇತೇಲಿಗೆ ಸಂಭವಿಸುವುದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.