Hosea 10:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ಇಸ್ರೇಲರು ಹೇಳುವುದೇನೆಂದರೆ, “ನಮಗೆ ರಾಜನಿಲ್ಲ, ನಾವು ಯೆಹೋವನನ್ನು ಗೌರವಿಸುವದಿಲ್ಲ. ಆತನ ಅರಸನು ನಮಗೇನೂ ಮಾಡಲು ಸಾಧ್ಯವಿಲ್ಲ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಮಗೆ ರಾಜನೇ ಇಲ್ಲ; ನಾವು ಯೆಹೋವನಲ್ಲಿ ಭಯಭಕ್ತಿಯಿಟ್ಟವರಲ್ಲ. ರಾಜನಾದರೋ ನಮಗಾಗಿ ಏನು ಮಾಡಿಯಾನು?” ಎಂದು ಈಗ ಅವರು ಅಂದುಕೊಳ್ಳಬೇಕಾಯಿತು.
Kannada BSI Bible 2016
ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮಗೆ ರಾಜನೇ ಇಲ್ಲ; ನಾವು ಯೆಹೋವನಲ್ಲಿ ಭಯಭಕ್ತಿಯಿಟ್ಟವರಲ್ಲ; ರಾಜನಾದರೋ ನಮಗಾಗಿ ಏನು ಮಾಡಿಯಾನು ಎಂದು ಈಗ ಅವರು ಅಂದುಕೊಳ್ಳಬೇಕಾಯಿತು.
Kannada Bible (KNCL) BSI 2016
“ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು, “ನಮಗೆ ಅರಸನಿಲ್ಲ, ಏಕೆಂದರೆ ನಾವು ಯೆಹೋವ ದೇವರಲ್ಲಿ ಭಯಭಕ್ತಿ ಇಟ್ಟವರಲ್ಲ. ಅರಸನು ನಮಗಿದ್ದರೂ ಏನು ಮಾಡುವನು?” ಎಂದುಕೊಳ್ಳುತ್ತಾರೆ.