Hosea 2:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು (ದೇವರು) ಆಕೆಯ ಉಲ್ಲಾಸಗಳನ್ನು ಅವಳಿಂದ ತೆಗೆಯುವೆನು. ಆಕೆಯ ಹಬ್ಬದ ದಿನಗಳು, ಅಮಾವಾಸ್ಯೆಯ ಹಬ್ಬ, ಸಬ್ಬತ್ ದಿನಗಳನ್ನು ಆಕೆಯಿಂದ ತೆಗೆದುಬಿಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಅವಳ ಉಲ್ಲಾಸ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಸಬ್ಬತ್ತು, ಮಹೋತ್ಸವ, ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
Kannada BSI Bible 2016
ನಾನು ಅವಳ ಉಲ್ಲಾಸವನ್ನೆಲ್ಲಾ ಅಂದರೆ ಅವಳ ಹಬ್ಬ ಅವಳ ಅಮಾವಾಸ್ಯೆ ಅವಳ ಸಬ್ಬತ್ತು ಅವಳ ಪರಿಶುದ್ಧ ಹಬ್ಬಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಅವಳ ಉಲ್ಲಾಸ, ಹಬ್ಬ, ಅಮಾವಾಸ್ಯೆ, ಸಬ್ಬತ್ತು, ಮಹೋತ್ಸವ, ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
Kannada Bible (KNCL) BSI 2016
ಅವಳ ಸಂಭ್ರಮಗಳನ್ನು - ಹಬ್ಬ, ಹುಣ್ಣಿಮೆ, ಸಬ್ಬತ್ ಆಚರಣೆ, ಸಭೆಸಮಾರಂಭಗಳು - ಇವೆಲ್ಲವನ್ನೂ ನಿಲ್ಲಿಸಿಬಿಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅವಳಿಗೆ ಉಲ್ಲಾಸಕರವಾದ ಅವಳ ಹಬ್ಬ, ಅವಳ ಅಮಾವಾಸ್ಯೆ, ಅವಳ ಸಬ್ಬತ್ ದಿನದ ಆಚರಣೆ, ಅವಳ ಸಭಾ ಸಮಾರಂಭ ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.