Hosea 2:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಆಕೆಯ ಬಾಯಿಯಿಂದ ಬಾಳ್ ದೇವರುಗಳ ಹೆಸರನ್ನು ತೆಗೆದುಬಿಡುವೆನು. ಆಮೇಲೆ ಜನರು ಎಂದಿಗೂ ಬಾಳನ ಹೆಸರೆನ್ನೆತ್ತುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಬಾಳ್ ದೇವತೆಗಳ ಹೆಸರುಗಳನ್ನು ನಿನ್ನ ಬಾಯೊಳಗಿಂದ ತೊಲಗಿಸುವೆನು; ಅವುಗಳನ್ನು ಇನ್ನು ಹೆಸರಿಸದಿರುವಿ.
Kannada BSI Bible 2016
ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯೊಳಗಿಂದ ತೆಗೆದು ಹಾಕುವೆನು; ಅವು ಇನ್ನು ತಮ್ಮ ಹೆಸರಿನಿಂದ ಜ್ಞಾಪಕ ಮಾಡಲ್ಪಡುವದೇ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯೊಳಗಿಂದ ತೊಲಗಿಸುವೆನು; ಅವುಗಳನ್ನು ಇನ್ನು ಎತ್ತದಿರುವಿ.
Kannada Bible (KNCL) BSI 2016
ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಛರಿಸದಂತೆ ಮಾಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯಿಂದ ತೆಗೆದುಹಾಕುವೆನು. ಇನ್ನು ಮುಂದೆ ಅವರ ಹೆಸರನ್ನು ಕರೆಯಲಾಗುವುದಿಲ್ಲ.