Hosea 4:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲ್ ಜನರೇ, ಯೆಹೋವನ ಮಾತಿಗೆ ಕಿವಿಗೊಡಿರಿ! ಈ ದೇಶದಲ್ಲಿ ವಾಸಿಸುವ ಜನರ ವಿರುದ್ಧವಾಗಿ ಯೆಹೋವನು ತನ್ನ ವಾದವನ್ನು ಅವರ ಮುಂದಿಡುತ್ತಾನೆ. “ಈ ದೇಶದಲ್ಲಿರುವ ಜನರು ಯೆಹೋವನನ್ನು ನಿಜವಾಗಿಯೂ ತಿಳಿದಿಲ್ಲ. ಅವರು ಯೆಹೋವನಿಗೆ ಸತ್ಯವಂತರೂ ಅಲ್ಲ. ನಿಷ್ಠಾವಂತರೂ ಅಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದ ಹಾಕಿದ್ದಾನೆ. ಏಕೆಂದರೆ ಪ್ರೀತಿ, ಸತ್ಯ, ದೇವಜ್ಞಾನಗಳು ದೇಶದಲ್ಲಿಲ್ಲ.
Kannada BSI Bible 2016
ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರೇ, ಯೆಹೋವನ ವಾಕ್ಯವನ್ನು ಕೇಳಿರಿ; ಯೆಹೋವನು ದೇಶನಿವಾಸಿಗಳ ಮೇಲೆ ವಿವಾದಹಾಕಿದ್ದಾನೆ. ಏಕಂದರೆ ಪ್ರೀತಿ ಸತ್ಯತೆ ದೇವಜ್ಞಾನಗಳು ದೇಶದಲ್ಲಿಲ್ಲ;
Kannada Bible (KNCL) BSI 2016
ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.