Hosea 4:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲಿಗೆ ಅನೇಕ ಸಂಗತಿಗಳನ್ನು ಯೆಹೋವನು ಕೊಟ್ಟಿರುತ್ತಾನೆ. ಆತನು ಕುರಿಗಳನ್ನು ವಿಶಾಲವಾದ ಮತ್ತು ಹುಲುಸಾದ ಹುಲ್ಲುಗಾವಲಿಗೆ ಒಯ್ಯುವ ಕುರುಬನಂತಿದ್ದಾನೆ. ಆದರೆ ಇಸ್ರೇಲ್ ಹಠಮಾರಿಯಾಗಿರುತ್ತದೆ. ಬಾರಿಬಾರಿಗೆ ಹೊರಗೆ ಓಡುವ ಯೌವನ ಹಸುವಿನಂತಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲು ಮೊಂಡ ಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲ ಸ್ಥಳದಲ್ಲಿ ಮೇಯಿಸುವನೋ?
Kannada BSI Bible 2016
ಹಿಂಜರಿಯುವ ಕಡಸಿನ ಹಾಗೆ ಇಸ್ರಾಯೇಲು ಹಿಂಜ ರಿಯುತ್ತದೆ; ಈಗ ಕರ್ತನು ವಿಸ್ತಾರ ಸ್ಥಳದಲ್ಲಿರುವ ಕುರಿಮರಿಯ ಹಾಗೆ ಅವರನ್ನು ಮೇಯಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲು ಅಗಡುಹಸುವಿನಂತೆ ಮೊಂಡುತನದಿಂದ ನಡೆದಿದೆ; ಈಗ ಯೆಹೋವನು ಅದನ್ನು ಕುರಿಯಂತೆ ವಿಶಾಲಸ್ಥಳದಲ್ಲಿ ಮೇಯಿಸುವನೋ?
Kannada Bible (KNCL) BSI 2016
ಇಸ್ರಯೇಲಿನವರು ಹತೋಟಿಗೆ ಬಾರದ ಹೋರಿಯಂತೆ ಮೊಂಡಾಗಿದ್ದಾರೆ. ಸರ್ವೇಶ್ವರ ಅವರನ್ನು ಈಗ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಕುರಿಗಳಂತೆ ಮೇಯಿಸಲು ಸಾಧ್ಯವೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಠಮಾರಿ ಹಸುವಿನ ಹಾಗೆ ಇಸ್ರಾಯೇಲು ಹಟಮಾರಿಯಾಗಿದೆ. ಈಗ ಯೆಹೋವ ದೇವರು ಹುಲ್ಲುಗಾವಲಲ್ಲಿರುವ ಕುರಿಮರಿಯ ಹಾಗೆ ಅವರನ್ನು ಹೇಗೆ ಮೇಯಿಸುವರು?