Hosea 4:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ಅಮಲೇರಿದ ಮೇಲೆ ಸೂಳೆಯರಂತೆ ವರ್ತಿಸುತ್ತಾರೆ. ಅವರು ಲಂಚವನ್ನು ಪ್ರೀತಿಸುತ್ತಾರೆ ಮತ್ತು ಲಂಚಕೊಡುವಂತೆ ಒತ್ತಾಯ ಮಾಡುತ್ತಾರೆ. ಆ ಅಧಿಪತಿಗಳು ತಮ್ಮ ಜನರ ಮೇಲೆ ಅಪಮಾನ ಬರಮಾಡುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮದ್ಯಪಾನ ಮುಗಿದ ಕೂಡಲೆ ವ್ಯಭಿಚಾರದಲ್ಲಿ ತೊಡಗುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.
Kannada BSI Bible 2016
ಅವರು ಮಿತಿವಿಾರಿ ಕುಡಿಯುತ್ತಾರೆ; ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ; ಅವರನ್ನು ಆಳುವವರು ನಾಚಿಕೆ ಯನ್ನು ಪ್ರೀತಿ ಮಾಡಿಯೇ ಮಾಡುತ್ತಾರೆ.ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸದೆ ಮತ್ತು ಅವರು ತಮ್ಮ ಬಲಿಗಳಿಂದ ನಾಚಿಕೆ ಪಡುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸುರಾಪಾನಮುಗಿದ ಕೂಡಲೆ ಸೂಳೆತನದಲ್ಲಿ ಬೀಳುತ್ತಾರೆ; ದೇಶಪಾಲಕರು ಅವಮಾನದಲ್ಲಿ ಅತ್ಯಾಶೆಪಡುತ್ತಾರೆ.
Kannada Bible (KNCL) BSI 2016
ಅವರು ಮದ್ಯಪಾನವನ್ನು ಮಾಡಿದ ನಂತರ ವ್ಯಭಿಚಾರಕ್ಕೆ ಇಳಿಯುತ್ತಾರೆ. ಮಾನಕ್ಕಿಂತ ಅವಮಾನವೇ ಅವರಿಗೆ ಅತಿ ಪ್ರಿಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಮಿತಿಮೀರಿ ಕುಡಿಯುತ್ತಾರೆ. ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ. ಅವರನ್ನು ಆಳುವವರು ಅವಮಾನ ಕಾರ್ಯಗಳಲ್ಲಿ ಇಷ್ಟಪಡುತ್ತಾರೆ.