Hosea 4:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು (ಯಾಜಕರು) ಹಗಲಿನಲ್ಲಿ ಬಿದ್ದುಹೋಗುವಿರಿ. ರಾತ್ರಿ ಹೊತ್ತಿನಲ್ಲಿ ಪ್ರವಾದಿಗಳೂ ನಿಮ್ಮ ಜೊತೆಗೆ ಬೀಳುವರು ಮತ್ತು ನಾನು ನಿಮ್ಮ ತಾಯಿಯನ್ನು ಸಹ ನಾಶಮಾಡುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಯಾಜಕರೇ, ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.
Kannada BSI Bible 2016
ಆದದರಿಂದ ನೀನು ಹಗಲಿನಲ್ಲಿ ಬೀಳುವಿ; ಪ್ರವಾದಿಯೂ ನಿನ್ನ ಸಂಗಡ ರಾತ್ರಿಯಲ್ಲಿ ಬೀಳುವನು; ನಾನು ನಿನ್ನ ತಾಯಿ ಯನ್ನು ನಾಶ ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
[ಆಹಾ, ಯಾಜಕರೇ,] ನೀವು ಹಗಲಿನಲ್ಲಿ ಎಡವುವಿರಿ; ರಾತ್ರಿಯಲ್ಲಿ ನಿಮ್ಮೊಂದಿಗೆ ಪ್ರವಾದಿಗಳೂ ಎಡವುವರು; ನಾನು ನಿಮ್ಮ ವಂಶಮೂಲವನ್ನು ನಾಶಮಾಡುವೆನು.
Kannada Bible (KNCL) BSI 2016
ಹಗಲಿನಲ್ಲೇ ನೀವು ಮುಗ್ಗರಿಸುತ್ತೀರಿ. ರಾತ್ರಿಯಲ್ಲಿ ಪ್ರವಾದಿಗಳು ಸಹ ನಿಮ್ಮೊಂದಿಗೆ ಮುಗ್ಗರಿಸುತ್ತಾರೆ. ನಿಮ್ಮ ವಂಶವೃಕ್ಷವನ್ನೇ ನಾನು ನಿರ್ಮೂಲಮಾಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಬೀಳುವೆ. ಪ್ರವಾದಿಗಳು ನಿನ್ನ ಸಂಗಡ ಮುಗ್ಗರಿಸಿಬೀಳುವರು. ಆದ್ದರಿಂದ ನಾನು ನಿನ್ನ ತಾಯಿಯನ್ನು ನಾಶಮಾಡುವೆನು.