Hosea 5:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಫ್ರಾಯೀಮು ತನ್ನ ವ್ಯಾಧಿಯನ್ನು ನೋಡಿದನು. ಯೆಹೂದವು ತನ್ನ ಗಾಯಗಳನ್ನು ನೋಡಿದನು. ಆಮೇಲೆ ಸಹಾಯಕ್ಕಾಗಿ ಅಶ್ಶೂರ್ಯರ ಬಳಿಗೆ ಹೋದರು. ಆ ಮಹಾ ಅರಸನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಆದರೆ ಆ ಅರಸನು ನಿಮ್ಮನ್ನು ಗುಣಮಾಡನು. ನಿಮ್ಮ ಗಾಯಗಳನ್ನು ಗುಣಮಾಡಲು ಸಾಧ್ಯವಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು.
Kannada BSI Bible 2016
ಎಫ್ರಾಯಾಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ ಎಫ್ರಾಯೀಮ್ ಅಶ್ಯೂರಕ್ಕೆ ಹೋಗಿ ಅರಸನಾದ ಯಾರೇಬನ ಬಳಿಗೆ ಕಳುಹಿಸಿತು; ಆದಾಗ್ಯೂ ಅವನು ನಿಮ್ಮನ್ನು ಸ್ವಸ್ಥಮಾಡ ಲಿಲ್ಲ, ಇಲ್ಲವೆ ನಿಮ್ಮ ಗಾಯವನ್ನು ಗುಣಪಡಿಸಲೂ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ವ್ರಣವನ್ನು ಗುಣಪಡಿಸಲಾರನು.
Kannada Bible (KNCL) BSI 2016
“ಎಫ್ರಯಿಮ್ ತನ್ನ ರೋಗವನ್ನು ಅರಿತುಕೊಂಡಿತು; ಜುದೇಯವು ತನ್ನ ಹುಣ್ಣನ್ನು ಕಂಡುಕೊಂಡಿತು. ಆಗ ಎಫ್ರಯಿಮ್ ಅಸ್ಸೀರಿಯಾದ ಕಡೆಗೆ ತಿರುಗಿಕೊಂಡು ಜಗಳಗಂಟಿಯಾದ ರಾಜನ ಬಳಿಗೆ ದೂತರನ್ನು ಕಳುಹಿಸಿತು. ಆದರೆ ಅವನು ನಿಮ್ಮ ರೋಗವನ್ನು ವಾಸಿಮಾಡಲಾರನು, ನಿಮ್ಮ ಹುಣ್ಣನ್ನು ಗುಣಪಡಿಸಲಾರನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಎಫ್ರಾಯೀಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ, ಎಫ್ರಾಯೀಮ್ ಅಸ್ಸೀರಿಯಕ್ಕೆ ತಿರುಗಿ, ಸಹಾಯಕ್ಕಾಗಿ ಮಹಾ ಅರಸನ ಬಳಿಗೆ ಕಳುಹಿಸಿತು. ಆದರೆ ನಿಮ್ಮನ್ನು ಗುಣಪಡಿಸಲು ಅವನು ಶಕ್ತನಲ್ಲ. ನಿಮ್ಮ ಗಾಯವನ್ನು ಗುಣಪಡಿಸಲಾರನು.