Hosea 7:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಫ್ರಾಯೀಮನ ಹೆಮ್ಮೆಯು ಅವನಿಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತದೆ. ಜನರಿಗೆ ನಾನಾ ತರದ ಸಂಕಟಗಳು ಬಂದಾಗ್ಯೂ ಅವರು ತಮ್ಮ ದೇವರಾದ ಯೆಹೋವನ ಬಳಿಗೆ ಹೋಗಲಿಲ್ಲ. ಜನರು ತಮ್ಮ ಸಹಾಯಕ್ಕಾಗಿ ಆತನಿಗೆ ಮೊರೆಯಿಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ; ಆತನನ್ನು ಆಶ್ರಯಿಸಲಿಲ್ಲ.
Kannada BSI Bible 2016
ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ; ಆದರೆ ಅವರು ತಮ್ಮ ಕರ್ತನಾದ ದೇವರ ಕಡೆಗೆ ತಿರುಗದೆ ಇದ್ದಾರೆ, ಇಲ್ಲವೆ ಆತನನ್ನು ಇದಕ್ಕೆಲ್ಲಾ ಹುಡು ಕುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ, ಆತನನ್ನು ಆಶ್ರಯಿಸಲಿಲ್ಲ.
Kannada Bible (KNCL) BSI 2016
ಇಸ್ರಯೇಲಿನ ಅಹಂಕಾರವೇ ಅದರ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಷ್ಟೆಲ್ಲ ಸಂಭವಿಸಿದರೂ ಅದು ತನ್ನ ದೇವರಾದ ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗುವುದಿಲ್ಲ; ಅವರನ್ನು ಆಶ್ರಯಿಸುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲಿನ ಗರ್ವವು ಅವನಿಗೆ ವಿರುದ್ಧವಾಗಿ ಸಾಕ್ಷಿಕೊಡುತ್ತದೆ. ಆದರೂ ಅವರು ತಮ್ಮ ಯೆಹೋವ ದೇವರ ಕಡೆಗೆ ತಿರುಗದೆ ಇದ್ದಾರೆ. ಆತನನ್ನು ಹುಡುಕದೇ ಇದ್ದಾರೆ.