Hosea 7:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೃದಯಪೂರ್ವಕವಾಗಿ ಅವರು ನನ್ನನ್ನು ಕರೆಯಲಿಲ್ಲ. ಹೌದು, ಅವರು ತಮ್ಮ ಹಾಸಿಗೆಗಳ ಮೇಲೆ ಅಳುವರು. ಆಹಾರಧಾನ್ಯ, ಹೊಸ ದ್ರಾಕ್ಷಾರಸವನ್ನು ಕೇಳುವಾಗ, ಬೇರೆಯವರ ದೇಶಗಳಲ್ಲಿ ಆಹಾರಕ್ಕಾಗಿ ಅಲೆದಾಡುವಾಗ ಅವರು ಅಳುವರು. ಆದರೆ ತಮ್ಮ ಹೃದಯಗಳಲ್ಲಿ ಅವರು ನನ್ನಿಂದ ದೂರವಾಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯ ದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು, ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ.
Kannada BSI Bible 2016
ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ.
Kannada Bible (KNCL) BSI 2016
ಅವರು ಹೃದಯಪೂರ್ವಕವಾಗಿ ನನಗೆ ಪ್ರಾರ್ಥನೆಮಾಡುವುದಿಲ್ಲ. ಬದಲಿಗೆ ಅವರ ಹಾಸಿಗೆಗಳ ಮೇಲೆ ಬಿದ್ದು ಅರಚುತ್ತಾರೆ. ಧಾನ್ಯದ್ರಾಕ್ಷಾರಸಗಳಿಗಾಗಿ ಕಿರಿಚಿಕೊಳ್ಳುತ್ತಾರೆ. ನನಗೆ ವಿರುದ್ಧವಾಗಿ ಪ್ರತಿಭಟಿಸುತ್ತಾ ತಮ್ಮ ದೇಹಗಳನ್ನು ಪರಚಿಕೊಳ್ಳುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ, ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ. ಧಾನ್ಯ ಮತ್ತು ದ್ರಾಕ್ಷಾರಸಗಳ ನಿಮಿತ್ತ ಅವರು ತಮ್ಮ ದೇವರುಗಳಿಗೆ ಮನವಿ ಮಾಡುವಾಗ ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುತ್ತಾರೆ, ಆದರೆ ಅವರು ನನ್ನಿಂದ ದೂರವಿರುತ್ತಾರೆ.