Hosea 7:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು. ಮೋಸದ ಬಿಲ್ಲಿನಂತೆ ಅವರಾದರು. ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು. ಆದರೆ ಅವರು ಕತ್ತಿಯಲ್ಲಿ ಸಾಯುವರು. ಆಗ ಈಜಿಪ್ಟಿನ ಜನರು ಅವರನ್ನು ನೋಡಿ ನಗಾಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅತ್ತಿತ್ತ ತಿರುಗಿಕೊಳ್ಳುತ್ತಾರೆ, ದೇವರ ಕಡೆಗೆ ತಿರುಗಿಕೊಳ್ಳುವುದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ. ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿಮಿತ್ತ ಖಡ್ಗದಿಂದ ಹತರಾಗಿ ಬೀಳುವರು; ಅವರ ಸೋಲು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವುದು.
Kannada BSI Bible 2016
ಅವರು ಹಿಂತಿರುಗುತ್ತಾರೆ, ಆದರೆ ಮಹೋನ್ನತನಾ ದಾತನ ಕಡೆಗೆ ಅಲ್ಲ. ಅವರು ಮೋಸ ಮಾಡುವ ಬಿಲ್ಲಿನ ಹಾಗೆ ಇದ್ದಾರೆ; ಅವರ ಪ್ರಧಾನರ ನಾಲಿಗೆಯ ಹುಚ್ಚು ಕೂಗಾಟದ ನಿಮಿತ್ತ ಕತ್ತಿಯಿಂದ ಬೀಳುವರು; ಇದೇ ಐಗುಪ್ತದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅತ್ತಿತ್ತ ತಿರುಗಿಕೊಳ್ಳುತ್ತಾರೆ, ಮೇಲಕ್ಕೆ ಮಾತ್ರ ತಿರುಗಿಕೊಳ್ಳುವದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ; ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿವಿುತ್ತ ಖಡ್ಗಹತರಾಗಿ ಬೀಳುವರು; ಅವರ ಪತನವು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವದು.
Kannada Bible (KNCL) BSI 2016
ಅವರು ಅತ್ತಿತ್ತ ತಿರುಗಿಕೊಳ್ಳುತ್ತಾರೆ. ದೇವರ ಕಡೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿಗೆ ಸಮಾನರು. ಸೊಕ್ಕಿನ ನಾಲಿಗೆಯ ನಿಮಿತ್ತ ಅವರ ಮುಖಂಡರು ಹತರಾಗುವರು. ಅವರ ಪತನ ಈಜಿಪ್ಟಿಗೆ ಹಾಸ್ಯಾಸ್ಪದವಾಗುವುದು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.