Hosea 7:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರೊಟ್ಟಿಯನ್ನು ಸುಡಲು ರೊಟ್ಟಿಗಾರನು ಹಿಟ್ಟನ್ನು ನಾದುವನು. ರೊಟ್ಟಿಯು ಶಾಖದಿಂದ ಉಬ್ಬುತ್ತಿರುವಾಗ ರೊಟ್ಟಿಗಾರನು ಒಲೆಯನ್ನು ಮತ್ತಷ್ಟು ಉರಿಸುವುದಿಲ್ಲ. ಇಸ್ರೇಲರಾದರೋ ಹಾಗಲ್ಲ, ಅವರು ಒಲೆಯನ್ನು ಮತ್ತಷ್ಟು ಉರಿಸುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸಿ, ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ.
Kannada BSI Bible 2016
ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬೆಂಕಿ ಹೊತ್ತಿಸಿ ಉರಿಸಿ ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ.
Kannada Bible (KNCL) BSI 2016
ಅವರೆಲ್ಲರು ವ್ಯಭಿಚಾರಿಗಳೇ; ಅವರು ಉರಿಯುವ ಒಲೆಗೆ ಸಮಾನರು. ರೊಟ್ಟಿಸುಡುವವನು ನಾದಿದ ಹಿಟ್ಟು ಹುಳಿಯಾಗುವವರೆಗೂ ಬಿಟ್ಟಿರುವ ಬೂದಿ ಮುಚ್ಚಿದ ಕೆಂಡಕ್ಕೆ ಸಮಾನರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರೆಲ್ಲರು ವ್ಯಭಿಚಾರಿಗಳು, ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸುವ ಒಲೆಗೆ ಸಮಾನರಾಗಿದ್ದಾರೆ. ಅವನು ಹಿಟ್ಟು ನಾದಿದ ಮೇಲೆ, ಅದು ಹುಳಿಯಾಗುವ ತನಕ ಉರಿಸದೆ ಬಿಟ್ಟಿರುವ ಕೆಂಡಕ್ಕೆ ಸಮಾನರಾಗಿದ್ದಾರೆ.