Hosea 7:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜನರು ಗುಪ್ತವಾಗಿ ಯೋಜನೆಯನ್ನು ತಯಾರಿಸುವರು. ಉರಿಯುವ ಒಲೆಯಂತೆ ಅವರ ಹೃದಯವು ಉತ್ಸಾಹಗೊಳ್ಳುವುದು. ಅವರ ಉತ್ಸಾಹವು ರಾತ್ರಿಯೆಲ್ಲಾ ಉರಿಯುವುದು. ಅದು ಮುಂಜಾನೆಯಲ್ಲಿ ಧಗಧಗಿಸುವ ಬೆಂಕಿಯ ಕಾವಿನಂತಿರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿ ಉರಿಯುತ್ತಿದ್ದಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ.
Kannada BSI Bible 2016
ಅವರು ಹೊಂಚು ಹಾಕಿಕೊಂಡಿ ರುವಾಗ ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ; ಅವರ ರೊಟ್ಟಿಗಾರನು ರಾತ್ರಿ ಯೆಲ್ಲಾ ನಿದ್ರೆ ಮಾಡುತ್ತಾನೆ, ಬೆಳಿಗ್ಗೆ ಅದು ಪ್ರಜ್ವಲಿ ಸುವ ಬೆಂಕಿಯ ಹಾಗೆ ಉರಿಯುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿರುತ್ತಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ.
Kannada Bible (KNCL) BSI 2016
ಒಳಸಂಚಿನಿಂದ ಕೂಡಿದ ಅವರ ಹೃದಯ ಒಲೆಯಂತೆ ಉರಿಯುತ್ತದೆ. ಅವರ ಕೋಪಾಗ್ನಿ ರಾತ್ರಿಯೆಲ್ಲ ಹೊತ್ತಿಕೊಂಡೇ ಇರುತ್ತದೆ. ಬೆಳಗಾದದ್ದೇ ಧಗಧಗನೆ ಭುಗಿಲೇರುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಹೊಂಚುಹಾಕಿಕೊಂಡಿದ್ದಾಗ, ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ. ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ ಬೆಳಿಗ್ಗೆ ಅದು ಪ್ರಜ್ವಲಿಸುವ ಬೆಂಕಿಯ ಹಾಗೆ ಉರಿಯುತ್ತದೆ.

Recommended Reading