Hosea 7:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅನ್ಯರು ಎಫ್ರಾಯೀಮನ ಶಕ್ತಿಯನ್ನು ಮುರಿಯುವರು. ಆದರೆ ಅವನಿಗೆ ಅದು ತಿಳಿದಿರುವದಿಲ್ಲ. ಎಫ್ರಾಯೀಮನ ತಲೆಯಲ್ಲಿ ನರೆಕೂದಲು ಬಂದಾಗ್ಯೂ ಅದಕ್ಕೆ ತಿಳಿವಳಿಕೆ ಬಂದಿರುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನೆರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ.
Kannada BSI Bible 2016
ಪರಕೀಯರು ಅವನ ಶಕ್ತಿಯನ್ನು ನುಂಗಿಬಿಟ್ಟಿದ್ದಾರೆ; ಅದು ಅವನಿಗೆ ಗೊತ್ತಿಲ್ಲ; ಹೌದು, ನರೆ ಕೂದಲು ಅಲ್ಲಲ್ಲಿ ಅವನ ಮೇಲೆ ಅದೆ. ಆದಾಗ್ಯೂ ಅವನು ತಿಳಿಯದೇ ಇದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ.
Kannada Bible (KNCL) BSI 2016
ಅನ್ಯಜನರು ಅದರ ಶಕ್ತಿಯನ್ನು ಹೀರಿಕೊಂಡರೂ ಅದಕ್ಕೆ ಅರಿವಿಲ್ಲ. ಅದರ ತಲೆಗೂದಲು ನೆರೆತುಹೋದರೂ ಅದಕ್ಕೆ ಪ್ರಜ್ಞೆ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವಿದೇಶಿಯರು ಅವನ ಶಕ್ತಿಯನ್ನು ಹೀರಿಬಿಟ್ಟಿದ್ದಾರೆ. ಅದು ಅವನಿಗೆ ಗೊತ್ತಿಲ್ಲ. ನರೆಕೂದಲು ಸಹ ಅವನ ಮೇಲೆ ಇದೆ. ಆದರೂ ಅವನು ತಿಳಿಯದೇ ಇದ್ದಾನೆ.