Hosea 9:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಒಂದುವೇಳೆ ಇಸ್ರೇಲರಿಗೆ ಮಕ್ಕಳು ಹುಟ್ಟಿದರೂ ಪ್ರಯೋಜನವಿಲ್ಲ. ಯಾಕೆಂದರೆ ಆ ಮಕ್ಕಳನ್ನು ಅವರಿಂದ ತೆಗೆದುಬಿಡುವೆನು. ನಾನು ಅವರನ್ನು ತೊರೆದುಬಿಡುವೆನು. ಆಗ ಅವರಿಗೆ ಸಂಕಟದ ಮೇಲೆ ಸಂಕಟವು ಪ್ರಾಪ್ತಿಯಾಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ, ಯಾರೂ ಉಳಿಯದಂತೆ ಮಾಡಿ ಅವರಿಗೆ ಪುತ್ರ ಶೋಕವನ್ನು ಉಂಟುಮಾಡುತ್ತಲೇ ಬರುವೆನು; ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ!
Kannada BSI Bible 2016
ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಯಾವನೂ ಉಳಿಯದೆ ಇರುವ ತನಕ ಅವರಿಗೆ ಪುತ್ರಶೋಕವನ್ನು ಉಂಟುಮಾಡುತ್ತಲೇ ಬರುವೆನು; ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ!
Kannada Bible (KNCL) BSI 2016
ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ, ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು. ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ!