Hosea 9:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಎಫ್ರಾಯೀಮ್ ಶಿಕ್ಷಿಸಲ್ಪಡುವುದು. ಅದರ ಬೇರು ಒಣಗುತ್ತಲಿದೆ. ಇನ್ನು ಅವರಿಗೆ ಮಕ್ಕಳಾಗದು. ಒಂದುವೇಳೆ ಮಕ್ಕಳಾದಲ್ಲಿ ಅವರ ದೇಹದಿಂದ ಬರುವ ಆ ಅಮೂಲ್ಯ ಶಿಶುವನ್ನು ನಾನು ಸಾಯಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಫ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ. ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು.
Kannada BSI Bible 2016
ಎಫ್ರಾಯಾಮ್ಯರು ಹೊಡೆಯಲ್ಪಟ್ಟಿದ್ದಾರೆ, ಅವರ ಬೇರು ಒಣಗಿ ಹೋಗಿದೆ, ಅವರು ಫಲವನ್ನು ಕೊಡುವದಿಲ್ಲ; ಹೌದು, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಪ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ; ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು.
Kannada Bible (KNCL) BSI 2016
ಎಫ್ರಯಿಮಿಗೆ ಏಟು ಬಿದ್ದಿದೆ; ಅವರ ವಂಶದ ಬೇರು ಬತ್ತಿಹೋಗಿದೆ. ಅವರು ಫಲಹೀನರಾಗಿದ್ದಾರೆ. ಮಕ್ಕಳನ್ನು ಹೆತ್ತರೂ ಅವಳ ಕರುಳ ಕುಡಿಯನ್ನು ಕತ್ತರಿಸಿಹಾಕುವೆನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ. ಅವರ ಬೇರು ಒಣಗಿಹೋಗಿದೆ, ಅವರು ಫಲವನ್ನು ಕೊಡುವುದಿಲ್ಲ, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.