Hosea 9:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರೂ ಪ್ರವಾದಿಯೂ ಕಾವಲುಗಾರರಂತೆ ಎಫ್ರಾಯೀಮನ್ನು ಕಾಪಾಡುತ್ತಿದ್ದಾರೆ. ಆದರೆ ದಾರಿಯಲ್ಲಿ ಅನೇಕ ಉರುಲುಗಳಿವೆ. ಜನರು ಪ್ರವಾದಿಯನ್ನು ಹಗೆ ಮಾಡುತ್ತಾರೆ. ದೇವರ ಆಲಯದಲ್ಲಿಯೂ ಅವನನ್ನು ಹಗೆ ಮಾಡುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ.
Kannada BSI Bible 2016
ಎಫ್ರಾಯಾಮಿನ ಕಾವಲುಗಾ ರನು ನನ್ನ ದೇವರೊಂದಿಗೆ ಇದ್ದನು; ಆದರೆ ಪ್ರವಾ ದಿಯು ತನ್ನ ಎಲ್ಲಾ ದಾರಿಗಳಲ್ಲಿ ಬೇಟೆಯ ಬಲೆಯಾಗಿ ದ್ದಾನೆ; ಅವನ ದೇವರ ಆಲಯದಲ್ಲಿ ಹಗೆತನವು ಉಂಟು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚುಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಯ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿರೋಧವು ಕಾದಿದೆ.
Kannada Bible (KNCL) BSI 2016
ಎಫ್ರಯಿಮನ ದೇವಜನರಿಗೆ ಪ್ರವಾದಿಯೇ ಕಾವಲುಗಾರ. ಆದರೂ ಅವನ ಹಾದಿಯಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ. ದೇವರ ಆಲಯದಲ್ಲೂ ಅವನಿಗೆ ಹಗೆತನ ಕಾದಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನನ್ನ ದೇವರೊಂದಿಗೆ ಪ್ರವಾದಿಯು ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ, ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ.