Isaiah 1:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಚೀಯೋನ್ ನಗರಿಯು ದ್ರಾಕ್ಷಿತೋಟದಲ್ಲಿರುವ ಜನಶೂನ್ಯವಾದ ಡೇರೆಯಂತಿದೆ; ಸೌತೆಯ ಹೊಲದಲ್ಲಿ ಪಾಳುಬಿದ್ದಿರುವ ಮನೆಯಂತಿದೆ; ಶತ್ರುಗಳಿಗೆ ಸೋತುಹೋದ ನಗರದಂತಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೂಸಲೇಮಿನ ನಗರವೊಂದೇ ಉಳಿದು, ದ್ರಾಕ್ಷಿತೋಟದ ಮನೆಯಂತೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಲ್ಪಟ್ಟ ಪಟ್ಟಣದ ಹಾಗೆಯೂ ಇದೆ.
Kannada BSI Bible 2016
ಚೀಯೋನ್‌ ಕುಮಾರಿಯು ದ್ರಾಕ್ಷೇತೋಟ ದಲ್ಲಿರುವ ಗುಡಿಸಲಿನ ಹಾಗೆಯೂ ಸೌತೆಯ ತೋಟ ದಲ್ಲಿರುವ ಮನೆಯ ಹಾಗೆಯೂ ಮುತ್ತಿಗೆ ಹಾಕಲಟ್ಟಿರುವ ಪಟ್ಟಣದ ಹಾಗೆಯೂ ಬಿಡಲ್ಪಟ್ಟಿದ್ದಾಳೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಚೀಯೋನ್ ನಗರಿಯೊಂದೇ ಉಳಿದು ದ್ರಾಕ್ಷೇತೋಟದ ಮಂಚಿಕೆಯಂತೆಯೂ ಸವುತೆಯ ಹೊಲದ ಗುಡಸಲಿನ ಹಾಗೂ ಮುತ್ತಿದ ಪಟ್ಟಣದೋಪಾದಿಯಲ್ಲಿಯೂ ಇದೆ.
Kannada Bible (KNCL) BSI 2016
ಸಿಯೋನ್ ನಗರವೊಂದೇ ಮುತ್ತಿಗೆಗೆ ತುತ್ತಾದ ಪಟ್ಟಣದಂತೆ, ದ್ರಾಕ್ಷಾತೋಟದ ಅಟ್ಟಣಿಯಂತೆ, ಸೌತೆ ಹೊಲದ ಗುಡಿಸಿಲಿನಂತೆ ಸುರಕ್ಷತೆಯ ಅವಕಾಶವಿಲ್ಲದೆ ಇದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಚೀಯೋನ್ ಪುತ್ರಿಯು ದ್ರಾಕ್ಷಿ ತೋಟದಲ್ಲಿರುವ ಮನೆಯ ಹಾಗೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಿರುವ ಪಟ್ಟಣದ ಹಾಗೆಯೂ ಇದೆ.