Isaiah 10:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಆ ದೊಡ್ಡ ಮರವನ್ನು (ಅಶ್ಶೂರವನ್ನು) ಕಡಿದುಹಾಕುವದನ್ನು ನೋಡು! ತನ್ನ ಮಹಾಶಕ್ತಿಯಿಂದ ಆತನು ಮಹಾವೀರರೂ ದೊಡ್ಡಜನರೂ ಎನ್ನದೆ ಎಲ್ಲರನ್ನೂ ಕಡಿದುಹಾಕುವನು. ಇನ್ನುಮೇಲೆ ಅವರು ಮಹಾಜನರೆಂದು ಕರೆಯಲ್ಪಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸುವನು. ಅವು ಧಡಮ್ಮನೆ ಬೀಳುವವು. ಉನ್ನತವಾದ ವೃಕ್ಷಗಳು ಕಡಿದು ಕೆಳಗೆ ಬೀಳುವವು. ಎತ್ತರವಾದ ಮರಗಳು ನೆಲದ ಪಾಲಾಗುವವು.
Kannada BSI Bible 2016
ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು.ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸಿ ಢಮ್ಮನೆ ಬೀಳಿಸುವನು; ಉನ್ನತ ವೃಕ್ಷಗಳು ಕಡಿದುಹೋಗುವವು,
Kannada Bible (KNCL) BSI 2016
ಇಗೋ, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಮರದ ಕೊಂಬೆಗಳನ್ನು ದುಡುಮ್ಮನೆ ಬೀಳಿಸುವರು. ಉನ್ನತವಾದ ವೃಕ್ಷಗಳನ್ನು ಕಡಿದುಹಾಕುವರು. ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ಕರ್ತದೇವರು ಆಗಿರುವ ಸೇನಾಧೀಶ್ವರ ಯೆಹೋವ ದೇವರು ಭಯಂಕರವಾಗಿ ಕೊಂಬೆಯನ್ನು ಕತ್ತರಿಸುವರು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವುವು, ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.