Isaiah 14:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬೇರೆ ಅನೇಕ ಅರಸರು ಸತ್ತುಹೋದರು. ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ. ಆದರೆ ನೀನು ಅವರೊಂದಿಗೆ ಸೇರಲಾರೆ. ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ. ನೀನು ನಿನ್ನ ಜನರನ್ನೇ ಸಾಯಿಸಿರುವೆ. ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಾಲ ಕೆಳಗೆ ತುಳಿಯಲ್ಪಟ್ಟ ಹೆಣದಂತೆಯೂ, ನೀನು ಆ ಅರಸರೊಡನೆ ಸಮಾಧಿಗೆ ಸೇರುವುದಿಲ್ಲ, ಏಕೆಂದರೆ ನೀನು ದೇಶವನ್ನು ಹಾಳುಮಾಡಿ, ನಿನ್ನ ಪ್ರಜೆಯನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ಎಂದೆಂದಿಗೂ ಜ್ಞಾಪಕಕ್ಕೆ ಬರುವುದಿಲ್ಲ.”
Kannada BSI Bible 2016
ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಆ ರಾಜರಂತೆ ಗೋರಿಗೆ ಸೇರುವದಿಲ್ಲ; ನಿನ್ನ ಪ್ರಜೆಯನ್ನು ಕೊಂದು ನಿನ್ನ ದೇಶವನ್ನು ಹಾಳುಮಾಡಿದ್ದೀ, ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಿರುವದಲ್ಲವೆ.
Kannada Bible (KNCL) BSI 2016
ಸ್ವಂತ ಜನರನೇ ಕೊಂದ ನಿನಗೆ ಸ್ವಂತ ನಾಡನೇ ನಾಶಗೈದ ನಿನಗೆ ಸಿಗದು ರಾಜ್ಯವೈಭವದ ಸಂಸ್ಕಾರ ಗೋರಿಗೆ, ‘ಹೇಳಹೆಸರಿಲ್ಲದ ಗತಿ ದುರುಳರ ಸಂತಾನಕೆ’.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಆ ರಾಜರಂತೆ ಸಮಾಧಿಗೆ ಸೇರದಿರುವಿ. ಏಕೆಂದರೆ ನಿನ್ನ ದೇಶವನ್ನು ನೀನು ನಾಶಮಾಡಿ, ನಿನ್ನ ಜನರನ್ನು ಕೊಂದುಹಾಕಿದಿ. ದುಷ್ಟರ ಸಂತಾನವು ನಿರಂತರವೂ ನಿರ್ನಾಮವಾಗಲಿ.