Isaiah 16:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ದೇಶದ ಅಧಿಪತಿಗೆ ಕಾಣಿಕೆಗಳನ್ನು ಕಳುಹಿಸಬೇಕು. ನೀವು ಸೇಲದ ಕುರಿಮರಿಯನ್ನು ಮರುಭೂಮಿಯ ಮೂಲಕ ಚೀಯೋನ್ ಕುಮಾರ್ತೆಯ ಪರ್ವತಕ್ಕೆ ಕಳುಹಿಸಿಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರದ ಪರ್ವತಕ್ಕೆ ಕಳುಹಿಸಿರಿ.
Kannada BSI Bible 2016
ದೇಶವನ್ನು ಆಳುವವನಿಗೆ ಕುರಿಮರಿಯನ್ನು ಸೆಲದಿಂದ ಅರಣ್ಯದ ಕಡೆಗೆ ಚೀಯೋನಿನ ಕುಮಾರ್ತೆಯರ ಬೆಟ್ಟಕ್ಕೆ ಕಳುಹಿಸಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇಶವನ್ನಾಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಗಳನ್ನು ಅರಣ್ಯದ ಕಡೆಯಿರುವ ಸೆಲದಿಂದ ಚೀಯೋನ್ ನಗರಿಯ ಪರ್ವತಕ್ಕೆ ಕಳುಹಿಸಿರಿ.
Kannada Bible (KNCL) BSI 2016
ಕಳುಹಿಸಿ ಕುರಿಗಳನು ಕಪ್ಪಕಾಣಿಕೆಯಾಗಿ ದೇಶಾಧಿಪತಿಗೆ, ಕಳುಹಿಸಿ ಮರುಭೂಮಿಯ ಸೆಲಾದಿಂದ ಸಿಯೋನ್ ಪರ್ವತಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಯನ್ನು ಸೆಲ ಬಂಡೆಯಿಂದ ಮರುಭೂಮಿಯ ಕಡೆಗೆ, ಚೀಯೋನ್ ಪುತ್ರಿಯರ ಪರ್ವತಕ್ಕೆ ಕಳುಹಿಸಿರಿ.