Isaiah 17:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರೋಯೇರ್ ಪ್ರಾಂತ್ಯದ ನಗರಗಳನ್ನು ಜನರು ಬಿಟ್ಟುಹೋಗುವರು. ಆ ಪಾಳುಬಿದ್ದ ನಗರಗಳಲ್ಲಿ ಕುರಿಮಂದೆಗಳು ತಿರುಗಾಡುವವು. ಅವುಗಳಿಗೆ ತೊಂದರೆ ಕೊಡಲು ಯಾರೂ ಇರುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರೋಯೇರಿನ ಪಟ್ಟಣಗಳು ನಿರ್ಜನವಾಗಿ, ಮಂದೆಗಳಿಗೆ ಆಸರೆಯಾಗುವವು. ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.
Kannada BSI Bible 2016
ಆರೋಯೇರಿನ ಪಟ್ಟಣಗಳು ತಳ್ಳಿಹಾಕ ಲ್ಪಟ್ಟಿವೆ; ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ಮಲಗುವ ಮಂದೆಗಳಿಗೆ ಸ್ಥಳವಾಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರೋಯೇರಿನ ಪಟ್ಟಣಗಳು ನಿರ್ಜನವಾಗಿ ಮಂದೆಗಳಿಗೆ ಆಸರೆಯಾಗುವವು; ಅವು ಯಾರ ಹೆದರಿಕೆಯೂ ಇಲ್ಲದೆ ಅಲ್ಲಿ ತಂಗುವವು.
Kannada Bible (KNCL) BSI 2016
ಸಿರಿಯದ ನಗರಗಳೆಲ್ಲ ನಿರ್ಜನ ಪ್ರದೇಶಗಳಾಗಿ ಗೋಮಾಳವಾಗುವುವು. ಅಲ್ಲಿ ದನಕರುಗಳು ನಿರ್ಭಯದಿಂದ ತಂಗುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, ಅವು ಯಾರ ಹೆದರಿಕೆಯೂ ಇಲ್ಲದೆ ಮಲಗುವ ಮಂದೆಗಳಿಗೆ ಸ್ಥಳವಾಗುವುವು.