Isaiah 17:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಆ ಸಮಯದಲ್ಲಿ ರೆಫಾಯೀಮ್ ಕಣಿವೆಯಲ್ಲಿ ಧಾನ್ಯದ ಸುಗ್ಗಿಯಂತಿರುವದು. ಕೆಲಸಗಾರರು ಹೊಲಗಳಲ್ಲಿ ಬೆಳೆಯನ್ನು ಕೊಯ್ದು ಧಾನ್ಯವನ್ನು ಶೇಖರಿಸುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೊಲದಲ್ಲಿ ಬೆಳೆ ಕೊಯ್ಯುವವನು ಪೈರುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವುದು. ಹೌದು, ರೆಫಾಯೀಮ್ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆ ಇರುವುದು.
Kannada BSI Bible 2016
ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ ರೆಫಾಯಾಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೊಲಕೊಯ್ಯುವವನು ದಂಟುಗಳನ್ನು ಒಟ್ಟುಗೂಡಿಸಿ ಕೈಯಿಂದ ತೆನೆಗಳನ್ನು ಕತ್ತರಿಸುವ ಹಾಗಿರುವದು; ಹೌದು, ರೆಫಾಯೀಮ್ ತಗ್ಗಿನಲ್ಲಿ ಹಕ್ಕಲನ್ನು ಆರಿಸುವಂತಿರುವದು.
Kannada Bible (KNCL) BSI 2016
ಅದು ಕೊಯ್ದ ಹೊಲದಂತಿರುವುದು, ತೆನೆಕತ್ತರಿಸಿದ ಹುಲ್ಲಿನಂತಿರುವುದು. ಕೂಳೆಯನ್ನೂ ಬಿಡದೆ ಆಯ್ದುಕೊಂಡ ರೆಫಾಯಿಮ್ ಕಣಿವೆಯಂತೆ ಇರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ, ರೆಫಾಯಿಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವುದು.