Isaiah 17:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಯಗಳಲ್ಲಿ ಜನರು ತಮ್ಮ ನಿರ್ಮಾಣಿಕನಾದ ದೇವರ ಕಡೆಗೆ ದೃಷ್ಟಿಸಿ ನೋಡುವರು. ಅವರ ಕಣ್ಣುಗಳು ಇಸ್ರೇಲಿನ ಪರಿಶುದ್ಧನನ್ನು ನೋಡುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ಜನರು ತಮ್ಮ ಸೃಷ್ಟಿಕರ್ತನನ್ನೇ ದೃಷ್ಟಿಸುವರು ಮತ್ತು ಇಸ್ರಾಯೇಲಿನ ಸದಮಲಸ್ವಾಮಿಯ ಕಡೆಗೆ ಕಣ್ಣುಗಳನ್ನು ತಿರುಗಿಸುವರು.
Kannada BSI Bible 2016
ಆ ದಿನದಲ್ಲಿ ಮನುಷ್ಯನು ತನ್ನನ್ನು ಉಂಟು ಮಾಡಿದವನ ಮೇಲೆ ದೃಷ್ಟಿಯಿಡು ವನು ಇಸ್ರಾಯೇಲಿನ ಪರಿಶುದ್ಧನ ಕಡೆಗೆ ಅವನ ಕಣ್ಣುಗಳು ಲಕ್ಷಿಸುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ಜನರು ತಮ್ಮ ಕೈಯಿಂದ ಮಾಡಿದ ಬಲಿಪೀಠಗಳನ್ನು ಲಕ್ಷಿಸದೆಯೂ ತಮ್ಮ ಬೆರಳುಗಳಿಂದ ನಿರ್ಮಿಸಿದ ಅಶೇರವೆಂಬ ವಿಗ್ರಹಸ್ತಂಭಗಳನ್ನಾಗಲಿ ಸೂರ್ಯಸ್ತಂಭಗಳನ್ನಾಗಲಿ ದೃಷ್ಟಿಸದೆಯೂ
Kannada Bible (KNCL) BSI 2016
ಆ ದಿನದಂದು ಜನರು ತಮ್ಮ ಕೈಯಿಂದ ಕಟ್ಟಿದ ಬಲಿಪೀಠಗಳನ್ನಾಗಲೀ, ಬೆರಳುಗಳಿಂದ ನಿರ್ಮಿಸಿದ ಆಶೇರಾ ದೇವತೆಯ ಸ್ತಂಭಗಳನ್ನಾಗಲೀ, ಧೂಪವೇದಿಕೆಗಳನ್ನಾಗಲೀ ಪೂಜಿಸದೆ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ, ಇಸ್ರಯೇಲಿನ ಪರಮಪಾವನ ಸ್ವಾಮಿಯ ಕಡೆ ತಿರುಗಿಕೊಳ್ಳುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು.