Isaiah 17:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಸಮಯದಲ್ಲಿ ಕೋಟೆಗೋಡೆಗಳಿರುವ ಎಲ್ಲಾ ಪಟ್ಟಣಗಳು ನಿರ್ಜನವಾಗುವದು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳುವ ಕಾಲದಲ್ಲಿ ಹೇಗೆ ಅಡವಿಗಳಂತೆಯೂ ಬೆಟ್ಟಗಳಂತೆಯೂ ಇದ್ದವೋ ಅದೇ ರೀತಿಯಲ್ಲಿ ಇರುವವು. ಆ ಸಮಯದಲ್ಲಿ ಇಸ್ರೇಲರು ದೇಶದೊಳಗೆ ಪ್ರವೇಶಿಸುವಾಗ ಅಲ್ಲಿಯ ನಿವಾಸಿಗಳೆಲ್ಲರೂ ಓಡಿಹೋದರು. ಮುಂಬರುವ ದಿವಸಗಳಲ್ಲಿ ದೇಶವು ಮತ್ತೆ ನಿರ್ಜನವಾಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು ಪೂರ್ವದಲ್ಲಿ ಇಸ್ರಾಯೇಲರ ಭಯದಿಂದ ನಿರ್ಜನವಾಗಿದ್ದ, ಅದು ಅಡವಿಯಲ್ಲಿಯೂ, ಬೆಟ್ಟಗಳ ತುದಿಯ ಮೇಲೂ ಕಾಣುವ ಹಾಳು ನಿವೇಶನಗಳಂತಿರುವವು, ಅಂತೂ ದೇಶವೆಲ್ಲಾ ಹಾಳಾಗಿರುವುದು.
Kannada BSI Bible 2016
ಆ ದಿವಸದಲ್ಲಿ ಅವನ ಬಲ ವಾದ ಪಟ್ಟಣಗಳು ಬಿಟ್ಟುಬಿಟ್ಟ ಅರಣ್ಯಗಳ ಹಾಗೆಯೂ ಇಸ್ರಾಯೇಲಿನ ಮಕ್ಕಳ ಮುಂದೆ ಬಿಡಲ್ಪಟ್ಟ ಕೊನೆಗಳ ಹಾಗೆಯೂ ಇದ್ದು ಹಾಳಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ದೇಶದ ಬಲವಾದ ಕೋಟೆಗಳು [ಪೂರ್ವದಲ್ಲಿ] ಇಸ್ರಾಯೇಲ್ಯರ ಭಯದಿಂದ ನಿರ್ಜನವಾಗಿದ್ದ ಈಗ ಅಡವಿಯಲ್ಲಿಯೂ ಬೆಟ್ಟಗಳ ತುದಿಯ ಮೇಲೂ ಕಾಣುವ ಪಾಳು ನಿವೇಶನಗಳಂತಿರುವವು; ಅಂತು ದೇಶವೆಲ್ಲಾ ಹಾಳಾಗಿರುವದು;
Kannada Bible (KNCL) BSI 2016
ಆ ದಿನದಂದು ನಾಡಿನ ಸುಭದ್ರವಾದ ನಗರಗಳು ನಿರ್ಜನ ಪ್ರದೇಶಗಳಾಗುವುವು. ಇಸ್ರಯೇಲರಿಗೆ ಹೆದರಿ ಅಮೋರ್ಯರು ಮತ್ತು ಹಿವ್ವಿಯರು ಬಿಟ್ಟುಹೋದ ಹಾಳು ನಿವೇಶನಗಳಂತಾಗುವುವು, ನಾಡೆಲ್ಲ ಹಾಳುಬೀಳುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು.