Isaiah 18:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಭಯಂಕರವಾದ ಒಂದು ಘಟನೆಯು ನಡೆಯುವದು. ಅದು ಪುಷ್ಪಗಳು ಅರಳುವ ಕಾಲದ ನಂತರ ನಡೆಯುವದು. ಹೊಸ ದ್ರಾಕ್ಷಾಲತೆಗಳು ಚಿಗುರುತ್ತಾ ಬೆಳೆಯುವವು. ಆದರೆ ಅವು ಫಲಕೊಡುವದಕ್ಕಿಂತ ಮೊದಲೇ ಶತ್ರುಗಳು ಬಂದು ಬಳ್ಳಿಗಳನ್ನು ಕೊಯ್ದುಹಾಕುವರು. ಬಳ್ಳಿಗಳನ್ನು ನಾಶಮಾಡಿ ವೈರಿಗಳು ಅವುಗಳನ್ನು ದೂರ ಬಿಸಾಡಿಬಿಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷಿ ದೋರೆ ಕಾಯಿಯಾಗುವಾಗ, ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.
Kannada BSI Bible 2016
ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷೇ ಕಾಯಿಯಾಗುವಾಗ ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕು ವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೊಯ್ಲಿನ ಕಾಲಕ್ಕೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಿಂದಾದ ಹೀಚು ದೋರೆಗಾಯಿಯಾಗುತ್ತಿರುವಾಗ ಆತನು ಕುಡುಗೋಲುಗಳಿಂದ ಕುಡಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು.
Kannada Bible (KNCL) BSI 2016
ಗಿಡದಲ್ಲಿ ಮೊಗ್ಗು ಕಚ್ಚಿ, ಹೂ ಅರಳಿ, ಹೀಚು ದೋರೆಗಾಯಿಯಾಗುತ್ತಿರುವಾಗ, ಕೊಯಿಲು ಕಾಲಕ್ಕೆ ಮುಂಚೆಯೇ ಅದರ ಕೊಂಬೆಗಳನ್ನೂ ಕವಲುಗಳನ್ನೂ ಶತ್ರುಗಳು ಕತ್ತರಿಸಿಹಾಕುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ, ಚಿಗುರುಗಳನ್ನು ಕಡಿದುಹಾಕುವರು.