Isaiah 19:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನಾನು ಈಜಿಪ್ಟನ್ನು ಕಠಿಣನಾದ ಒಡೆಯನಿಗೆ ಒಪ್ಪಿಸುವೆನು. ಬಲಿಷ್ಠ ಒಡೆಯನು ಅವರನ್ನು ಆಳುವನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಐಗುಪ್ತ್ಯರನ್ನು ಕ್ರೂರವಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನು ಆಳುವನು” ಎಂದು ಸೇನಾಧೀಶ್ವರನಾದ ಯೆಹೋವನು ನುಡಿಯುತ್ತಾನೆ.
Kannada BSI Bible 2016
ಇದ ಲ್ಲದೆ ಐಗುಪ್ತವನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರ ನ್ನಾಳುವನು ಎಂದು ಸೈನ್ಯಗಳ ಕರ್ತನಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಐಗುಪ್ತ್ಯರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು; ಭಯಂಕರನಾದ ರಾಜನು ಅವರನ್ನಾಳುವನು ಎಂದು ಸೇನಾಧೀಶ್ವರನಾದ ಯೆಹೋವನು ನುಡಿಯುತ್ತಾನೆ.
Kannada Bible (KNCL) BSI 2016
“ಇದಲ್ಲದೆ ಈಜಿಪ್ಟಿನವರನ್ನು ಕ್ರೂರ ಅರಸನ ವಶಕ್ಕೆ ಒಪ್ಪಿಸುವೆನು. ರಾಜನು ದಬ್ಬಾಳಿಕೆಯಿಂದ ಅವರನ್ನು ಆಳುವನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಜಿಪ್ಟಿನವರನ್ನು ಕ್ರೂರನಾದ ಒಡೆಯನ ಕೈಗೆ ಒಪ್ಪಿಸುವೆನು. ಭಯಂಕರನಾದ ರಾಜನು ಅವರನ್ನಾಳುವನು, ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.