Isaiah 20:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದೇ ಸಮಯದಲ್ಲಿ ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ, “ಹೋಗು, ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಪಾದರಕ್ಷೆಗಳನ್ನು ತೆಗೆದಿಡು” ಎಂದು ಹೇಳಿದನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಪಾದರಕ್ಷೆಗಳಿಲ್ಲದೆ ತಿರುಗಾಡುತ್ತಿದ್ದನು.
Kannada BSI Bible 2016
ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಆಮೋಚನ ಮಗನಾದ ಯೆಶಾಯನಿಗೆ - ಏಳು, ಸೊಂಟದಿಂದ ಗೋಣಿತಟ್ಟನ್ನು ಬಿಚ್ಚು, ಕಾಲಿನಿಂದ ಕೆರವನ್ನು ಕಳಚು ಎಂದು ಇತರರಿಗೆ ಸೂಚನೆಯಾಗಿ ಅಪ್ಪಣೆಕೊಟ್ಟನು. ಅವನು ಹಾಗೆಯೇ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರುಗುತ್ತಿದ್ದನು.
Kannada Bible (KNCL) BSI 2016
ಅದಕ್ಕೆ ಮೂರು ವರ್ಷಗಳಿಗೆ ಮುಂಚೆಯೆ ಆಮೋಚನ ಮಗ ಯೆಶಾಯನಿಗೆ ಸರ್ವೇಶ್ವರ ಮುನ್ಸೂಚನೆಯಾಗಿ ಹೀಗೆಂದು ಹೇಳಿದ್ದರು: “ಎದ್ದೇಳು, ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು, ಕಾಲಿಗೆ ಹಾಕಿರುವ ಕೆರವನ್ನು ಕಳಚು.” ಅಂತೆಯೇ ಯೆಶಾಯನು ದಿಗಂಬರನಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದೇ ಸಮಯದಲ್ಲಿ ಯೆಹೋವ ದೇವರು ಆಮೋಚನ ಮಗ ಯೆಶಾಯನಿಗೆ, “ನಿನ್ನ ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಕೆರಗಳನ್ನು ತೆಗೆದಿಡು,” ಎಂದು ಹೇಳಿದರು. ಅವನು ಹಾಗೆ ಮಾಡಿ, ಬೆತ್ತಲೆಯಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.