Isaiah 20:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನರು ಇಥಿಯೋಪ್ಯದ ಕಡೆಗೆ ಸಹಾಯಕ್ಕಾಗಿ ನೋಡುವರು. ಅವರು ಕಂಗೆಟ್ಟು ಹೋಗುವರು. ಈಜಿಪ್ಟಿನ ಮಹಿಮೆಯನ್ನು ಗಮನಿಸಿದವರು ಈಗ ನಾಚಿಕೆಯಲ್ಲಿ ಬೀಳುವರು” ಎನ್ನುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನನ್ನ ಜನರು ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು.
Kannada BSI Bible 2016
ಆಗ (ನನ್ನ ಜನರು) ಅವನು ನಿರೀಕ್ಷಿಸಿಕೊಂಡಿದ್ದ ಐಥಿಯೋ ಪಿಯರ ನಿಮಿತ್ತವಾಗಿಯೂ ತಮ್ಮ ವೈಭವದ ಐಗುಪ್ತದ ವಿಷಯವಾಗಿಯೂ ಬೆಚ್ಚಿ ಬೆರಗಾಗಿ ನಾಚಿಕೆಪಡು ವರು.ಆ ದಿವಸದಲ್ಲಿ ಈ ತೀರದ ನಿವಾಸಿಗಳು ಹೇಳುವದೇನಂದರೆ--ಇಗೋ, ಅಶ್ಶೂರದ ಅರಸ ರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೇವೋ ಅವ ರಿಗೆ ಈ ಗತಿ ಬಂತಲ್ಲಾ ನಾವು ತಪ್ಪಿಸಿಕೊಳ್ಳುವದು ಹೇಗೆ ಅನ್ನುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ [ನನ್ನ ಜನರು] ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿವಿುತ್ತವಾಗಿಯೂ ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು.
Kannada Bible (KNCL) BSI 2016
ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನನ್ನ ಜನರು ಅವನು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಳ್ಳುತ್ತಿದ್ದ ಈಜಿಪ್ಟಿನ ವಿಷಯವಾಗಿಯೂ, ನಿರಾಶರಾಗಿ ನಾಚಿಕೆಪಡುವರು.